ಮಾಹಿತಿ
Trending

ಉತ್ತರಕನ್ನಡದ ಇಂದಿನ ಕೋವಿಡ್ ವಿವರ : ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 36 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಂದು ಯಾವುದೇ ಸಾವು ಸಂಭವಿಸಿಲ್ಲ.

ಕಾರವಾರದಲ್ಲಿ 17, ಹೊನ್ನಾವರ 1, ಭಟ್ಕಳದಲ್ಲಿ 4,ಅಂಕೋಲಾದಲ್ಲಿ 0, ಕುಮಟಾದಲ್ಲಿ 4, ಶಿರಸಿಯಲ್ಲಿ 4, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 5 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹೊನ್ನಾವರ 1, ಭಟ್ಕಳ 1, ಶಿರಸಿ 3, ಕಾರವಾರ 13, ಅಂಕೋಲಾ‌ 1, ಕುಮಟಾ 5, ಸಿದ್ದಾಪುರ 3, ಯಲ್ಲಾಪುರದಲ್ಲಿ ಇಬ್ಬರು ಕೋವಿಡ್ ಗೆದ್ದು ಮನೆಗೆ ಮರಳಿದ್ದಾರೆ.

ಅಂಕೋಲಾದಲ್ಲಿ ನಾಳೆಯೂ ಲಸಿಕಾಕರಣ ಮುಂದುವರಿಕೆ. ಇಂದು ತಾಲೂಕಿನಲ್ಲಿ 1 ಹೊಸ ಪಾಸಿಟಿವ್ ಕೇಸ್

ಅಂಕೋಲಾ ಸೆ 23: ತಾಲೂಕಿನಲ್ಲಿ ಗುರುವಾರ 1 ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿದೆ.. ಈ ಮೂಲಕ 18ಸಕ್ರಿಯ ಪ್ರಕರಣಗಳಿವೆ.

ಕ್ರಿಮ್ಸ್ ಕಾರವಾರ ಮತ್ತು ಕುಮಟಾದ ಖಾಸಗಿ ಆಸ್ಪತ್ರೆ ಹಾಗೂ ಮಂಗಳೂರಿನಲ್ಲಿ ತಲಾ ಓರ್ವ ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 15ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3680 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ಒಟ್ಟೂ 72 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.

ಸೆ 24 ರ ಶುಕ್ರವಾರ, ತಾಲೂಕಾಸ್ಪತ್ರೆ,ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಹಾರವಾಡ, ಹಿಲ್ಲೂರು,ಹಟ್ಟಿಕೇರಿ, ರಾಮನಗುಳಿ, ಬೆಳಸೆ,ಇತರೆ ಉಪ ಕೇಂದ್ರಗಳಾದ ಗ್ರಾಮ ಪಂಚಾಯತ್ ಹೊನ್ನೇಬೈಲ್, ಅಂಗನವಾಡಿ ಶೆಟಗೇರಿ,ಅಂಬೇಡ್ಕರ್ ಭವನ ವಂದಿಗೆ,ಅಗಸೂರು ಸೇರಿ ಒಟ್ಟೂ 3100 ಡೋಸ್ ಲಸಿಕೆ ಲಭ್ಯವಿದ್ದು ಸಾರ್ವಜನಿಕರು ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಎಲ್ಲೆಲ್ಲಿ ಎಷ್ಟು ಲಸಿಕೆಗಳು ಲಭ್ಯವಿವೆ .

ಇನ್ನಿತರ ಹೆಚ್ಚಿನ ಮಾಹಿತಿಗಾಗಿ,ಸ್ಥಳೀಯ ಆಶಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಹಾಗೂ ವೈದ್ಯರನ್ನು ಸಂಪರ್ಕಿಸಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button