Follow Us On

WhatsApp Group
ಮಾಹಿತಿ
Trending

ಬ್ಲಾಕ್ ಕಾಂಗ್ರೆಸ್‌ನಲ್ಲಿ ಇಂದಿರಾಗಾoಧಿ ಮತ್ತು ಸರದಾರ ಪಟೇಲ್ ಸ್ಮರಣೆ

ಹೊನ್ನಾವರ : ಅದ್ಭುತ ಶಕ್ತಿಯಾಗಿದ್ದ ಮಾಜಿ ಪ್ರಧಾನಿ ದಿ. ಇಂದಿರಾಗಾoಧಿ ಜಗತ್ತು ಕಂಡ ಮಹಾ ನಾಯಕಿಯಾಗಿ ಹೊರಹೊಮ್ಮಿದ್ದರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಅಭಿಪ್ರಾಯ ಪಟ್ಟರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ 37ನೇ ಪಣ್ಯ ತಿಥಿ ಮತ್ತು ದೇಶದ ಪ್ರಥಮ ಗೃಹಮಂತ್ರಿ ಸರದಾರ್ ವಲ್ಲಭಾಯಿ ಪಟೇಲ್‌ರವರ 146ನೇ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ತಮ್ಮ ಜೀವನದುದ್ದಕ್ಕೂ ದೇಶದ ಐಕ್ಯತೆ, ಸಮಗ್ರತೆಗೆ ಹೋರಾಡಿ, ಕೊನೆಗೂ ಹಂತಕರ ಗುಂಡಿಗೆ ಬಲಿಯಾದ ನಾಯಕಿ ಶ್ರೀಮತಿ ಇಂದಿರಾಗಾAಧಿ ಎಂದು ಸ್ಮರಿಸಿದರು. ಸುಮಾರು 17 ವರ್ಷಗಳಿಗೂ ಹೆಚ್ಚಿನ ಅವಧಿ ಭಾರತ ದೇಶವನ್ನು ಪ್ರಧಾನ ಮಂತ್ರಿಯಾಗಿ ಮುನ್ನಡೆಸಿ ‘ಗರಿಬಿ ಹಟಾವ್’, ‘ಹಸಿರು ಕಾಂತ್ರಿ’, ಮೂಲಕ ಬಡವರ ಕಣ್ಮಣಿಯಾಗಿ ಜನಪ್ರಿಯರಾಗಿದ್ದರು ಎಂದರು.

ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ ಮಾತನಾಡಿ ದೇಶ ಕಂಡ ಮಹಾನ ನಾಯಕರಾದ ಸರದಾರ್ ವಲ್ಲಬಾಯಿ ಪಟೇಲ್ ಮತ್ತು ಇಂದಿರಾಗಾoಧಿ ಇಂದಿನ ಯುವ ಪೀಳಿಗೆೆಗೆ ಆದರ್ಶರಾಗಿದ್ದಾರೆ ಎಂದರು. 1947 ರಲ್ಲಿ ಭಾರತದ ಪ್ರಥಮ ಗೃಹ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸರದಾರ ವಲ್ಲಭಬಾಯಿ ಪಟೇಲ್ ಅನೇಕ ದಿಟ್ಟ ನಿರ್ಣಯ ಕೈಗೊಂಡಿದ್ದರು. ಸ್ವತಂತ್ರ ಭಾರತದ ಶಿಲ್ಪಿ ಎಂದೇ ಹೆಸರಾಗಿದ್ದ ಅವರು, ರಾಜನ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದರು ಎಂದು ಪಟೇಲ್‌ರ ಆಡಳಿತವನ್ನು ಶ್ಲಾಘೀಸಿದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ ಮಾತನಾಡಿ ಶ್ರೀಮತಿ ಇಂದಿರಾಗಾoಧಿಯವರು ಉಳುವವನೇ ಒಡೆಯ ಎಂಬ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಕೊಟ್ಯಾಂತರ ಬಡವರಿಗೆ ಸೂರು ನೀಡಿದ ಶ್ರೇಷ್ಠ ನಾಯಕಿ ಎಂದರು.

ಕಾರ್ಯಕ್ರಮದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು, ಮುಖಂಡರು ಮಾಜಿ ಪ್ರಧಾನಿ ಇಂದಿರಾಗಾoಧಿ ಮತ್ತು ದೇಶದ ಪ್ರಥಮ ಗೃಹಮಂತ್ರಿ ಸರದಾರ ವಲ್ಲಬಾಯಿ ಪಟೇಲ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ, ಒಂದು ನಿಮಿಷದ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಆಗ್ನೇಲ್ ಡಾಯಸ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿಕ್ರಿಯಾ ಶೇಖ್, ಪಟ್ಟಣ ಪಂಚಾಯತ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಮೇಸ್ತ, ಸೇವಾದಳದ ಕೃಷ್ಣ ಮಾರಿಮನೆ, ಮುಖಂಡರಾದ ನೆಲ್ಸನ್ ರೊಡ್ರಗಿಸ್, ಅಲ್ಲು ಫರ್ನಾಂಡೀಸ್, ಮಹೇಶ ನಾಯ್ಕ, ಜೊಸೇಫ್ ಡಿಸೋಜಾ, ಶೇಖರ ಚಾರೋಡಿ, ಫರೀನ್ ಖಾನ್, ಜಯಂತಿ ಗೌಡ, ಮಧನರಾಜ್, ಹನೀಫ್ ಶೇಖ್ ಇನ್ನೂ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Back to top button