Focus News
Trending

ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ PU ವಿಭಾಗದ ವಿದ್ಯಾರ್ಥಿ ಸಂಘಟನೆ ಉದ್ಘಾಟನೆ

ಕುಮಟಾ;ವಿದ್ಯಾರ್ಥಿ ಪರಿಷತ ಎನ್ನುವದು ನಾಯಕತ್ವದ ಗುಣವನ್ನು ಬೆಳೆಸುತ್ತದೆ..ದೇಶದ ಮಹಾನ ನಾಯಕರಾಗುವಲ್ಲಿ ವಿದ್ಯಾರ್ಥಿ ಪರಿಷತ್ ಮುಖ್ಯ ವೇದಿಕೆ ಯಾಗಲಿದೆ.ವಿದ್ಯಾರ್ಥಿ ಸಂಘಟನೆ ಎನ್ನುವದು ಸಮಾಜದಲ್ಲಿ ಅನೇಕ ಬದಲಾವಣೆ ತರುತ್ತದೆ ಎಂದು ಕುಟುಂಬ ಯೋಜನಾ ನಿವೃತ್ತ ಅಧಿಕಾರಿ ಎಂ.ಎನ್.ಹೆಗಡೆ ಹೇಳಿದರು.

ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪಿ.ಯೂ.ವಿಭಾಗದ ವಿದ್ಯಾರ್ಥಿ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದರು.ಪಿಯೂಸಿ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ದೈಹಿಕ ಮಾನಸಿಕವಾಗಿ ಅನೇಕ ಬದಲಾವಣೆ ಉಂಟಾಗುತ್ತದೆ.ಏಕಗ್ರತೆ ಎನ್ನುವದು ಹಾಳಾಗುತ್ತದೆ.ಈ ಸಂದಭರ್ಬದಲ್ಲಿ ವಿದ್ಯಾರ್ಥಿ ಭವಿಷ್ಯ ಮಂಕಾಗುವ ಸಾಧ್ಯತೆ ಇರುತ್ತದೆ.ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸ ಬೇಕಾದರೆ ಕ್ಷಣಿಕ ಪ್ರಲೋಬನೆಗೆ ಒಳಗಾಗ ಬಾರದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪಿಯೂ ದ್ವಿತಿಯ ವರ್ಷದಲಿ ಅತಿ ಹೆಚ್ಚು ಅಂಕಗಳಿಸಿ ಜಿಲ್ಲೆಗೆ 9 ನೇ ರ‍್ಯಾಂಕ್ ಪಡೆದ ಶಿವಾನಿ ರೇವಣಕರ(ಶೇ.97.7)ಅವರು ಸಂಖ್ಯಾಶಾಸ್ತç,ಲೇಕ್ಕಶಾಸ್ತ ಹಾಗೂ ವಾಣಿಜ್ಯ ಶಾಸ್ತçದಲ್ಲಿ ಶೇ.100 ಅಂಕಗಳಿಸಿದ್ದು ಅವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು. ಅರ್ಥಶಾಸ್ತçದಲ್ಲಿ ಶೇ100 ಅಂಕಗಳಿಸಿರುವ ಅರ್ಪಿತಾ ಶೆಟ್ಟಿ, ವಾಣಿಜ್ಯ ಶಾಸ್ತçದಲ್ಲಿ ದೀಪಾಶ್ರೀ ಸಭಾಹಿತ್, ಕಂಪ್ಯೂಟರ್‌ದಲ್ಲಿ ಮುಸ್ಪಿರಾ ಇಸ್ಮಾಯಿಲ್ ¨ಬ್ಲು, ಸಂಸ್ಕçತದಲ್ಲಿ ವಿಜಯಕುಮಾರ ಗುನಗಾ ಮತ್ತು ವೇದಾ ಅಂಬಿಗ ಅವರುಗಳಿಗೆ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. 80 ಕ್ಕೂ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆನಾರಾ ಕಾಲೇಜು ಸೋಸೈಟಿಯ ಕಾರ್ಯಾಧಯಕ್ಷರಾದ ಡಿ.ಎಂ.ಕಾಮತ ಮಾತನಾಡಿ ವಿದ್ಯಾರ್ಥಿಗಳಲ್ಲಿ ದೃಢತೆ ಇದ್ದಲ್ಲಿ ತಪ್ಪುದಾರಿ ಹಿಡಿದವರನ್ನು ಹೇಗೆಸುಧಾರಿಸಬಹುದು ಎಂದು ಅನೇಕ ಉದಾಹರಣೆ ಮೂಲಕ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ.ಎನ್.ಜಿ.ಹೆಗಡೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳ ಪ್ರಯತ್ನ ಮತ್ತು ಉಪನ್ಯಾಸಕರ ಪರಿಶ್ರಮವು ಕಾಲೇಜಿನ ಕಿರ್ತಿ ಹೆಚ್ಚುವಂತೆ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು. ವೇದಿಕೆಯಲ್ಲಿ ಪದವಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ,ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ,ವಿದ್ಯಾರ್ಥಿ ಕಾರ್ಯದರ್ಶಿ ಆಯೂಷ ಶೇಟ್ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಯುನಿಯನ್ ಕಾರ್ಯಾಧ್ಯಕ್ಷರಾದ ಪ್ರೊ.ಯೋಗೀಶ ಭಟ್ಟ ಸ್ವಾಗತಿಸಿ ಪರಿಚಯಿಸಿದರು. ನವ್ಯಾ ಹೆಬ್ಬಾರ್ ಮತ್ತು ರಶ್ಮೀ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button