
ಶಿರಸಿ ಪೊಲೀಸರ ಕಾರ್ಯಾಚರಣೆ
44 ಸಾವಿರ ಮೌಲ್ಯದ ಗೋಮಾಂಸ ವಶಕ್ಕೆ
ಶಿರಸಿ: ಗೋಮಾಂಸ ಸಾಗಿಸುತ್ತಿದ್ದ ಐವರು ಶಿರಸಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿರಸಿಯ ನರಬೈಲ್ ಕ್ರಾಸ್ ಸಮೀಪ ಕಾರ್ಯಾಚರಣೆ ನಡೆಸಿ, ಗೋಮಾಂಸ ಸಾಗಿಸುತ್ತಿದ್ದವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಗೋಮಾಂಸವನ್ನು ತೆಗೆದುಕೊಂಡು ಶಿರಸಿ ಮಾರ್ಗವಾಗಿ ಸೊರಬಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಆರೋಪಿಗಳಿಂದ ಸುಮಾರು 44 ಸಾವಿರ ಮೌಲ್ಯದ ಗೋಮಾಂಸವನ್ನು ವಶಕ್ಕೆ ಪಡೆಯಲಾಗಿದೆ.
ವಿಸ್ಮಯ ನ್ಯೂಸ್ ಶಿರಸಿ