Join Our

WhatsApp Group
Info
Trending

ಹೊನ್ನಾವರ 24, ಅಂಕೋಲಾದಲ್ಲಿ 13 ಪಾಸಿಟಿವ್

ಅಂಕೋಲಾದಲ್ಲಿ ಗುಣಮುಖ 11 : ಸಕ್ರಿಯ 103
ಹೊನ್ನಾವರದಲ್ಲಿ ನಾಲ್ವರು ಗುಣಮುಖರಾಗಿ ಡಿಸ್ಚಾರ್ಜ್
116 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ

[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಇಂದು ಕೂಡಾ ಹೆಚ್ಚಿನ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಪಟ್ಟು 24 ಜನರಲ್ಲಿ ಪಾಸಿಟಿವ್ ಬಂದಿದೆ. ಪಟ್ಟಣದಲ್ಲಿ 14, ಗ್ರಾಮೀಣ ಭಾಗದಲ್ಲಿ 9 ಕೇಸ್ ದೃಢಪಟ್ಟಿದೆ.

ಪಟ್ಟಣದ ಕೆಳಗಿನ ಪಾಳ್ಯದ 65 ವರ್ಷದ ಮಹಿಳೆ, 26 ವರ್ಷದ ಯುವತಿ, 1 ವರ್ಷದ ಮಗು, ನ್ಯಾಯಾಲಯದ ಸಿಬ್ಬಂದಿಗಳಾದ 38 ವರ್ಷದ ಮಹಿಳೆ, 53 ವರ್ಷದ ಮಹಿಳೆ, 25 ವರ್ಷದ ಯುವತಿಗೆ ಸೋಂಕು ಪತ್ತೆಯಾಗಿದೆ.

ಮಾಸ್ತಿ ಕಟ್ಟೆಯ 56 ವರ್ಷದ ಮಹಿಳೆ, 69 ವರ್ಷದ ಮಹಿಳೆ, ಚರ್ಚ್ರೋಡಿನ 42 ವರ್ಷದ ಪುರುಷ, 27 ವರ್ಷದ ಯುವತಿ, 28 ವರ್ಷದ ಯುವಕ, ಉದ್ಯಮನಗರದ 26 ವರ್ಷದ ಯುವಕ, ಕೆಎಚ್‌ಬಿ ಕಾಲೋನಿಯ 42 ವರ್ಷದ ಮಹಿಳೆ, ಸುರಕಟ್ಟೆಯ 65 ವರ್ಷದ ಪುರುಷಗೆ ಪಾಸಿಟಿವ್ ಬಂದಿದೆ.

ಗ್ರಾಮೀಣ ಭಾಗವಾದ ಚಂದಾವರದ 54 ವರ್ಷದ ಪುರುಷ, ಕಡತೋಕಾದ 27 ವರ್ಷದ ಯುವತಿ, 58 ವರ್ಷದ ಮಹಿಳೆ, 30 ವರ್ಷದ ಮಹಿಳೆ, ಹಡಿನಬಾಳದ 73 ವರ್ಷದ ಪುರುಷ, ಖರ್ವಾದ 45 ವರ್ಷದ ಪುರುಷ, ಮಂಕಿಯ 33 ವರ್ಷದ ಮಹಿಳೆ, 6 ವರ್ಷದ ಬಾಲಕ, ಗುಣವಂತೆಯ 64 ವರ್ಷದ ಪುರುಷ ಸೇರಿ ಇಂದು 24 ಜನರಲ್ಲಿ ಸೋಂಕು ದೃಢಪಟ್ಟಿದೆ.

ತಾಲೂಕಾ ಆಸ್ಪತ್ರೆಯಿಂದ 4 ಜನರು ಡಿಚ್ಚಾರ್ಜ್ ಆಗಿದ್ದು, 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 116 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂಕೋಲಾದಲ್ಲಿ ಇಂದು 13 ಪಾಸಿಟವ್

ಅಂಕೋಲಾ : ತಾಲೂಕಿನಲ್ಲಿ ಮಂಗಳವಾರ ಒಟ್ಟೂ 13 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಸೋಂಕು ಮುಕ್ತರಾದ 11 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನಲ್ಲಿರುವ 60 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 103 ಪ್ರಕರಣಗಳು ಸಕ್ರಿಯವಾಗಿದೆ.

ಇಂದು ವಂದಿಗೆ, ಕಲಭಾಗ, ತೆಂಕಣಕೇರಿ, ಕೋಟೆವಾಡ, ಸಕಲಬೇಣ, ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಪ್ರದೇಶ ಸೇರಿದಂತೆ ತಾಲೂಕಿನ ನಾನಾ ಭಾಗಗಳಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟೂ 143 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಸ್ಮಯ ನ್ಯೂಸ್, ವಿಲಾಸ್ ನಾಯ್ಕ ಅಂಕೋಲಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Check Also
Close
Back to top button