Uttara Kannada
Trending

ನಾಡದೋಣಿಯ ಎಂಜಿನ್ ಕದ್ದ ಕಳ್ಳರ ಬಂಧನ

ಕುಮಟಾ: ತಾಲೂಕಿನ ಶಶಿಹಿತ್ಲದ ಹೆಡ್ ಬಂದರ್ ರೋಡ್ ಸಮೀಪದ ರಾಘವೇಂದ್ರ ಸುರೇಶ ಹರಿಕಾಂತ್ರ ಎಂಬುವವರ ನಾಡದೋಣಿಗೆ ಅಳವಡಿಸಿದ್ದ 1 ಲಕ್ಷ 25 ಸಾವಿರ ಮೌಲ್ಯದ ಯಮಹಾ ಕಂಪನಿಯ ಟು ಸ್ಟೊçÃಕ್ ಮೋಟಾರನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕುರಿತಾಗಿ ಪ್ರಕರಣ ದಾಖಲಾಗಿತ್ತು. ಈ ಒಂದು ಪ್ರಕರಣಕ್ಕೆ ಸಂಬoದಿಸಿದoತೆ ಎಸ್.ಪಿ ಕಾರವಾರ, ಎಡಿಶನಲ್ ಎಸ್.ಪಿ ಕಾರವಾರ ಹಾಗೂ ಎ.ಎಸ್.ಪಿ ಭಟ್ಕಳ ರವರ ಮಾರ್ಗದರ್ಶನದಲ್ಲಿ ಕುಮಟಾ ಸಿಪಿಐ ಪರಮೇಶ್ವರ ಗುನಗಾ ಇವರ ನೇತೃತ್ವದಲ್ಲಿ, ಪ್ರಕರಣದ ತನಿಖಾಧಿಕಾರಿಗಳಾದ ಕುಮಟಾ crime ಪಿ.ಎಸ್.ಐ ಸುಧಾ ಅಘನಾಶಿನಿಯವರು ಖಚಿತ ಮಾಹಿತಿಯ ಮೇರೆಗೆ ಕಳ್ಳತನ ಮಾಡಿದ ಇಬ್ಬರು ಆರೋಪಿತರನ್ನು ಬಂದಿಸಿದ್ದಾರೆ.

ಶಶಿಹಿತ್ಲದ ರವಿ ನಾರಾಯಣ ಹರಿಕಂತ್ರ ಮತ್ತು ಕಾಗಾಲ್‌ನ ಸಂದೀಪ ಮೋಹನ ಹಿಣಿ ಎಂಬುವವರೆ ಆರೋಪಿತರಾಗಿದ್ದು, ಆರೋಪಿತರಿಂದ ಕದ್ದಂತಹ 1 ಲಕ್ಷ 25 ಸಾವಿರ ಮೌಲ್ಯದ ನಾಡದೋಣಿಯ ಮೋಟಾರನ್ನು ಮತ್ತು ಆರೋಪಿತರು ಕಳ್ಳತನಕ್ಕೆ ಬಳಸಿದ ಸುಮಾರು 3 ಲಕ್ಷ ಮೌಲ್ಯದ ಮಾರುತಿ ಓಮಿನಿ ವಾಹನ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರೂ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿತರನ್ನು ಪತ್ತೆಮಾಡುವಲ್ಲಿ ಕುಮಟಾ ಪಿ.ಎಸ್.ಐ ಆನಂದಮೂರ್ತಿ, ಪಿ.ಎಸ್.ಐ ರವಿ ಗುಡ್ಡಿ, ಎ.ಎಸ್.ಪಿ ಎಸ್.ಎಸ್ ತಡಗೋಡ ಹಾಗೂ ಸಿಬ್ಬಂದಿಗಳಾದ ದಯಾನಂದ ನಾಯ್ಕ, ಸಂತೋಷ ಬಾಳೇರ, ಬಸವರಾಜ ಜಾಡರ್ ರವರು ಸಹಾಯ ಮಾಡಿದ್ದು, ಪ್ರಕರಣ ದಾಖಲಾದ ಎರಡು ದಿನಗಳೋಳಗಾಗಿ ಆರೋಪಿಗಳನ್ನು ಹಾಗೂ ಸ್ವತ್ತುಗಳನ್ನು ಪತ್ತೆ ಮಾಡಿದ ಕುಮಟಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಎಸ್.ಪಿ ಶಿವಪ್ರಕಾಶ ದೇವರಾಜು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮುಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button