ದಿನವೊಂದರಲ್ಲಿಯೇ 500ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆ
ಈವರೆಗಿನ ಗರಿಷ್ಠ ದಾಖಲೆ
ಅಂಕೋಲಾ : ತಾಲೂಕಿನಲ್ಲಿ ಮಂಗಳವಾರ 2 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದೆ. ಕೋಟೆವಾಡದ 45ರ ಮಹಿಳೆ ಮತ್ತು 20ರ ಯುವಕನಲ್ಲಿ ಸೋಂಕು ಲಕ್ಷಣಗಳು ದೃಢಪಟ್ಟಿವೆ. ಗುಣಮುಖರಾದ ಓರ್ವರನ್ನು ಬಿಡುಗಡೆಗೊಳಿಸಿಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 9 ಮಂದಿ ಸಹಿತ ಒಟ್ಟೂ 12 ಪ್ರಕರಣಗಳು ಸಕ್ರಿಯವಾಗಿದೆ.
52 ರ್ಯಾಟ್ ಮತ್ತು 454 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 506 ಸ್ಬ್ಯಾಬ್ ಟೆಸ್ಟ್ ನಡೆಸಲಾಗಿದ್ದು ಈ ಮೂಲಕ ದಿನವೊಂದರಲ್ಲಿಯೇ 500ಕ್ಕೂ ಹೆಚ್ಚು ಗಂಟಲುದ್ರವ ಮಾದರಿ ಸಂಗ್ರಹಿಸಲಾಗಿದೆ.
ಈ ಹಿಂದೆ ದಿನವೊಂದರಲ್ಲೇ 398 ಗಂಟಲುದ್ರವ ಮಾದರಿ ಪರೀಕ್ಷೆ ನಡೆಸಿರುವುದು ಗರಿಷ್ಠ ದಾಖಲೆಯಾಗಿತ್ತು. ಪದವಿ ತರಗತಿಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕೊವಿಡ್ ಟೆಸ್ಟ ನಡೆಸುತ್ತಿರುವುದು, ಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ