ಕುಮಟಾ: ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ದನಗಳ್ಳರ ಹಾವಳಿ ಮಿತಿಮೀರಿದೆ. ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ದನಗಳ್ಳರು ಮತ್ತೆ ತಮ್ಮ ಕೈಚಳಕವನ್ನು ಮುಂದುವರಿಸಿದ್ದು, ತಡರಾತ್ರಿಯ ವೇಳೆಯಲ್ಲಿ ತಾಲೂಕಿನ ಮೂರೂರಿನ 2 ಕಡೆಗಳಲ್ಲಿ ದನಗಳು ಕಳುವಾಗಿದೆ. ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಮೂರೂರಿನ ನಾಯ್ಕರಕೇರಿಯಲ್ಲಿ ರಸ್ತೆ ಪಕ್ಕದಲ್ಲಿ ಮಲಗಿದ್ದ ದನವೊಂದಕ್ಕೆ ಬ್ರೆಡ್ ನಲ್ಲಿ ಮತ್ತು ಬರುವ ಔಷಧಿ ನೀಡಿ ತಮ್ಮ ಕಾರಿನಲ್ಲಿ ತುಂಬುವ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರೊಬ್ಬರು ನೋಡಿದ್ದಾರೆ. ಅವರು ಕಳ್ಳರನ್ನು ನೋಡಿ ಕೂಗುವಷ್ಟರಲ್ಲಿ ಕಳ್ಳರು ದನವನ್ನು ಕದ್ದು ಪಾರಿಯಾಗಿದ್ದಾರೆ.
ಕಳೆದ ಕೆಲವು ತಿಂಗಳಿನಿoದ ಈ ಪ್ರದೇಶದಲ್ಲಿ ಪದೇ ಪದೇ ದನಗಳು ಕಳುವಾಗುತ್ತಿದ್ದು, ಈ ಕೃತ್ಯದಲ್ಲಿ ಊರಿನ ಕೆಲವರು ಕೂಡಾ ಶಾಮೀಲಾಗಿದ್ದಾರೆ ಎನ್ನುವುದು ಸಾರ್ವಜನಿಕರ ಸಂಶಯವಾಗಿದೆ. ಕೆಲವರು ತಮ್ಮ ದನಗಳು ಕಳುವಾದ ಬಗ್ಗೆ ಪೋಲಿಸರಿಗೆ ದೂರನ್ನು ಕೂಡಾ ದಾಖಲಿಸಿದ್ದಾರೆ.
ವಿಸ್ಮಯ ನ್ಯೂಸ್, ದೀಪೇಶ್ ನಾಯ್ಕ, ಕುಮಟಾ
ಮದುವೆ ಆಗುತ್ತಿಲ್ಲವೇ? ಉದ್ಯೋಗ ಸಮಸ್ಯೆಯೇ? ಇಲ್ಲಿದೆ ಪರಿಹಾರ
ದೈವಜ್ಞ ವಿದ್ಯಾಭೂಷಣ ಪ್ರಶಸ್ತಿ ವಿಜೇತರು, ದುರ್ಗಾದೇವಿ ಉಪಾಸಕರಾದ ಪಂಡಿತ ಶ್ರೀ ವಿ.ರಾಘವೇಂದ್ರ ರಾವ್ ಶಾರ್ಮಾ ಅವರು ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾರೆ. ಇವರು ಕಾಶಿಯಲ್ಲಿ ಜ್ಞಾನ ತಪಸ್ಸಿನಿಂದ ಯಂತ್ರ-ಮoತ್ರ-ವಾಕ್ಯಸಿದ್ಧಿ-ಸoಪಾದಿಸಿದ್ದು, ನೀವು ದೂರವಾಣಿ ಮೂಲಕ ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳಬಹುದು. ಕೂಡಲೇ ಸಂಪರ್ಕಿಸಿ: 9440269990