Follow Us On

WhatsApp Group
ಮಾಹಿತಿ
Trending

ಶಿಕ್ಷಕರಲ್ಲಿ ಹೆಚ್ಚುತ್ತಿದೆ ಕರೊನಾ: ಪಾಲಕರಲ್ಲಿ ಆತಂಕ

ಜಿಲ್ಲೆಯಲ್ಲಿಂದು 15 ಕರೊನಾ ಕೇಸ್
ಏಳು ಮಂದಿ ಗುಣಮುಖರಾಗಿ ಬಿಡುಗಡೆ

ಹೊನ್ನಾವರ: ತಾಲೂಕಿನಲ್ಲಿ ಇಂದು 3 ಜನರಲ್ಲಿ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಗ್ರಾಮೀಣ ಭಾಗದ ಮೂರು ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿದೆ.
ಗ್ರಾಮೀಣ ಭಾಗವಾದ ಸಾಲಕೋಡ 36 ವರ್ಷದ ಮಹಿಳೆ, 42 ವರ್ಷದ ಮಹಿಳೆ, ಚಂದಾವರದ 52 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. 8 ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರಸಿಯಲ್ಲಿ 3, ಯಲ್ಲಾಪುರದಲ್ಲಿ 1 ಕೋವಿಡ್ ಕೇಸ್

ಶಿರಸಿ: ತಾಲೂಕಿನಲ್ಲಿಂದು ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಸ್ತೂರಬಾ ನಗರ, ಹುಬ್ಬಳ್ಳಿ ರಸ್ತೆಯಲ್ಲಿ, ಕೂರ್ಸೆ ಕಂಪೌಂಡಿನಲ್ಲಿ ತಲಾ ಒಂದೊಂದು ಕೇಸ್ ದೃಢವಾಗಿದೆ. ಈವರೆಗೆ 1646 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, 1596 ಮಂದಿ ಗುಣಮುಖರಾಗಿದ್ದಾರೆ.

ಯಲ್ಲಾಪುರದಲ್ಲಿ ಒಬ್ಬರಿಗೆ ಸೋಂಕು:

ಯಲ್ಲಢಪುರ: ತಾಲೂಕಿನಲ್ಲಿ ಒಬ್ಬರಿಗೆ ಕರೊನಾ ಧೃಢಪಟ್ಟಿದ್ದು, 6 ಮಂದಿ ಗುಣಮುಖರಾಗಿದ್ದಾರೆ.
ಇಂದು ಹುಲ್ಲೋರಮನೆಯಲ್ಲಿ ಒಬ್ಬರಿಗೆ ಸೊಂಕು ತಗುಲಿದೆ. ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 4 ಕ್ಕೆ ಇಳಿದಿದೆ.

ಸಿದ್ದಾಪುರದ ಏಳು ಶಿಕ್ಷಕರಿಗೆ ಪಾಸಿಟಿವ್

ಸಿದ್ದಾಪುರ: ತಾಲೂಕಿನಲ್ಲಿ ಶಾಲಾ- ಕಾಲೇಜು ತರಗತಿಗಳು ಆರಂಭವಾಗುತ್ತುದ್ದಂತೆ ಕರೊನಾ ಆತಂಕ‌ ಹೆಚ್ಚಿದೆ, ಈ ಮಧ್ಯೆ ಶಾಲೆ ಆರಂಭವಾದ ಮೊದಲ ವಾರದಲ್ಲೇ ತಾಲೂಕಿನ ಆರು ಪ್ರಾಥಮಿಕ ಶಿಕ್ಷಕರು ಹಾಗೂ ಒಬ್ಬರು ಪ್ರೌಢಶಾಲಾ ಶಿಕ್ಷಕಿಗೆ ಕರೊನಾ ದೃಢಪಟ್ಟಿದೆ.‌ಇದು ಪಾಲಕರು ಹಾಗೂ ಮಕ್ಕಳು ಆತಂಕಕ್ಕೆ ಕಾರವಾಗಿದೆ. ಈಗ ಶಿಕ್ಷಕರಿಗೆ ಪಾಸಿಟಿವ್ ಬರುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ ಅಥವಾ ಬೇಡವೋ ಎಂಬ ಆತಂಕದಲ್ಲಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button