
ಗೋಕರ್ಣ: ಅಖಿಲ ಭಾರತ ಬ್ರಾಹ್ಮಣ ಸಂಘದ ಉತ್ತರ ಕನ್ನಡ ಜಿಲ್ಲೆಯ ಅಧ್ಯಕ್ಷರಾಗಿ ಕುಮಟಾ ತಾಲೂಕಿನ ಗೋಕರ್ಣದ ಕುಮಾರ್ ನಾರಾಯಣ ಮಾರ್ಕಾಂಡೆ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಬ್ರಾಹ್ಮಣ ಸಂಘದ ಪಂಚರಾಜ್ಯ ಪ್ರತಿನಿಧಿಗಳ ಸಂವಾದ ಸಭೆ ಹಾಗೂ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಪದಾಧಿಕಾರಿಗಳ ಸಂವಾದ ಸಮಾರಂಭದಲ್ಲಿ ಈ ಆಯ್ಕೆಯನ್ನು ಘೋಷಿಸಲಾಗಿದೆ.
ಗೋಕರ್ಣದ ವೈದಿಕ ಕುಟುಂಬದಲ್ಲಿ ಜನಿಸಿದ ಕುಮಾರ ಮಾರ್ಕಾಂಡೆ ಅವರು ತಮ್ಮ ಸರಳ, ಸಜ್ಜನಿಕೆಯಿಂದ ಉತ್ತಮ ಹೆಸರು ಗಳಿಸಿದ್ದು, ಸಂಘಟನೆಯಲ್ಲೂ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಬಿಜೆಪಿಯ ತಾಲೂಕಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ,ಸೈ ಎನಿಸಿಕೊಂಡಿದ್ದಾರೆ. ಇವರ ಈ ಎಲ್ಲಾ ಸಾಧನೆ ಪರಿಗಣಿಸಿ ಮಹತ್ವದ ಜವಾಬ್ದಾರಿ ಅರಸಿ ಬಂದಿದೆ.
ವಿಸ್ಮಯ ನ್ಯೂಸ್ ಗೋಕರ್ಣ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಜಿಲ್ಲಾ ಮಟ್ಟದ ಪ್ರಥಮ ವರ್ಷದ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಿ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾದಿoದ ಆಯೋಜನೆ
- ನೀಲಗೋಡ ಜಾತ್ರೆ ಯಶಸ್ವಿಯಾಗಿ ಸಂಪನ್ನ: ಯಕ್ಷಿ ಚೌಡೇಶ್ವರಿ ದೇವಿಯ ದರ್ಶನ ಪಡೆದ ಅಪಾರ ಭಕ್ತರು
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ