ಶಿರಸಿಗೂ ಕಾಲಿಟ್ಟ ಕಿಲ್ಲರ್ ಕರೊನಾ

ಜಿಲ್ಲೆಯ ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿರುವ ಶಿರಸಿಯಲ್ಲಿ ಒಮ್ಮೆಲೇ ಒಂಬತ್ತು ಕರೊನಾ ಪ್ರಕರಣಗಳು ದೃಢಪಟ್ಟಿರುವುದು ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದರೂ, ಶಿರಸಿಯಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಇಲ್ಲವೆಂದು ಜನರು ನೆಮ್ಮದಿಯಿಂದಿದ್ದರು. ಆದರೆ ಗುರುವಾರ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಮಾಹಿತಿ ತಿಳಿದ ಜನರು, ಭಯಭೀತರಾಗಿದ್ದಾರೆ. ಮೂರು ಕುಟುಂಬದ 8 ಮಂದಿ ಹಾಗೂ ದುಬೈನಿಂದ ವಾಪಸ್ಸಾಗಿದ್ದ ಒಬ್ಬನಿಗೆ ಗುರುವಾರ ಕರೋನಾ ಸೋಂಕು ಇರುವುದು ದೃಢ ಪಟ್ಟಿದೆ. ವಿμÉೀಶ ಎಂದರೆ ಇವರೆಲ್ಲ ಒಂದೇ ದಿನ ನಗರಕ್ಕೆ ಆಗಮಿಸಿದ್ದರು. ಸೋಂಕು ದೃಢಪಟ್ಟಿರುವ ಎಲ್ಲರೂ ಹೊರ ರಾಜ್ಯದಿಂದ ಬಂದವರಾಗಿದ್ದು, ಅವರಲ್ಲಿ ಎಂಟು ಜನರು ತಾಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು. ಒಬ್ಬರು ಹೋಟೆಲ್ ಕ್ವಾರಂಟೈನ್ ನಲ್ಲಿದ್ದರು.
ಮುಂಬೈನಲ್ಲಿ ವಾಸವಿದ್ದ ಶಿರಸಿ ಮೂಲದ 5 ಮಂದಿ ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆದು ಮೇ 14 ರಂದು ಮುಂಬೈ ಬಿಟ್ಟು ಶಿರಸಿಗೆ 15ರಂದು ತಲುಪಿದ್ದರು. ವಿಚಾರ ತಿಳಿದ ತಾಲೂಕು ಆಡಳಿತ ನಗರದ ಚಿಪಗಿ ಗೇಟ್ ಬಳಿ ವಾಹನ ತಡೆದು ಸಾಂಸ್ಥಿಕ ಕ್ವಾಂರಂಟೈನ್ ಗೆ ಕಳಿಸಿತ್ತು. ಇದರಲ್ಲಿ 6 ಮತ್ತು 7 ವರ್ಷದ ಹೆಣ್ಣು ಮಕ್ಕಳು ಸೇರಿಸಿ ಕುಟುಂಬದ 5 ವರಿಗೆ ಸೋಂಕು ದೃಢಪಟ್ಟಿದೆ. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶಿರಸಿ ಮೂಲದ ನಿವಾಸಿ ತನ್ನ ಹೆಂಡತಿ ಹಾಗೂ ಒಂದು ವರ್ಷದ ಮಗುವಿನ ಜತೆ ಮುಂಬೈನಿಂದ ಮೇ 15ರಂದು ಶಿರಸಿಗೆ ಆಗಮಿಸಿದ್ದರು. ಇದರಲ್ಲಿ ಹೆಂಡತಿ ಹಾಗೂ ಮಗುವಿಗೆ ಸೋಂಕು ದೃಢಪಟ್ಟಿದ್ದು, ಗಂಡನ ವರದಿ ಬಾಕಿ ಇದೆ.
ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಧಾರವಾಡದಲ್ಲಿ ವ್ಯವಹಾರ ಮಾಡುತ್ತಿದ್ದ ಶಿರಸಿ ಮೂಲದ ವ್ಯಕ್ತಿ ಕೆಲಸದ ನಿಮಿತ್ತ ಮಾ.18 ರಂದು ಮುಂಬೈಗೆ ತೆರಳಿದ್ದರು. ಲಾಕ್ ಡೌನ್ ಆದಾಗಿನಿಂದ ಸ್ನೇಹಿನತ ಜತೆ ಮುಂಬೈನ ಹೋಟೆಲ್ ಒಂದರಲ್ಲಿ ಕಾಲ ಕಳೆಯುತ್ತಿದ್ದ ಈತ ಮೇ 14ರಂದು ಮುಂಬೈ ಬಿಟ್ಟು 15ರಂದು ಶಿರಸಿ ನಗರಕ್ಕೆ ಆಗಮಿಸಿದ್ದ. ಆತ ಹಾಗೂ ಸ್ನೇಹಿತನನ್ನು ಸಾಂಸ್ಥಿಕ ಕೌರಂಟೈನ್ ಗೆ ಕಳುಹಿಸಲಾಗಿತ್ತು. ಈಗ ಈತನಿಗೆ ಸೊಂಕು ಇರುವುದು ದೃಢಪಟ್ಟಿದ್ದು, ಮತ್ತೊಬ್ಬನ ವರದಿಗೆ ಕಾಯಲಾಗುತ್ತಿದೆ. ಇದೇ ವೇಳೆ ಮಾತನಾಡಿದ ಶಿರಸಿ ಸಹಾಯಕ ಆಯುಕ್ತರು, ಹೊರ ರಾಜ್ಯಗಳಿಂದ ಬಂದವರನ್ನು ತಕ್ಷಣ ಕ್ವಾರಂಟೈನ್ ಮಾಡಲಾಗುತ್ತದೆ. ಕ್ವಾರಂಟೈನ್ ನಲ್ಲಿರುವವರಿಗೆ ಸೋಂಕು ದೃಢಪಟ್ಟಿರುವ ಕಾರಣಕ್ಕೆ ಜನರು ಭಯಪಡಬೇಕಾಗಿಲ್ಲ. ಯಾವುದೇ ರೋಗಿಗೂ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ..
ದುಬೈನಲ್ಲಿ ಶಿಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶಿರಸಿ ಮೂಲದ ಯುವಕ ಮಾರ್ಚ್ 1ರಂದು ದುಬೈ ಬಿಟ್ಟು ಮುಂಬೈಗೆ ವಾಪಸ್ ಆಗಿದ್ದ. ಮೇ 14ರಂದು ಅಲ್ಲಿಂದ ಶಿರಸಿಗೆ ಹೊರಟು 15ರಂದು ಶಿರಸಿ ನಗರಕ್ಕೆ ಆಗಮಿಸಿದ್ದ. ಆತ ತನಗೆ ಶಿಪ್ ನಲ್ಲಿ ರ್ಯಾಪಿಟ್ ಟೆಸ್ಟ್ ಮಾಡಿದ್ದರು ಎಂದು ತಿಳಿಸಿದ್ದರೂ ಆತನನ್ನು ಅಧಿಕಾರಿಗಳು ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿದ್ದರು. ಈಗ ಆತನಿಗೂ ಸೋಂಕು ತಗುಲಿರುವುದು ದೃಢ ಪಟ್ಟಿದೆ.
ವಿಸ್ಮಯ ನ್ಯೂಸ್, ಶಿರಸಿ

Exit mobile version