Follow Us On

WhatsApp Group
ಮಾಹಿತಿ
Trending

ಉತ್ತರಕನ್ನಡದಲ್ಲಿ ಕೋವಿಡ್ ಗೆ ಮತ್ತೆ 21 ಮಂದಿ ಬಲಿ: ಜಿಲ್ಲೆಯಲ್ಲಿ 1208 ಪ್ರಕರಣ ದಾಖಲು: 929 ಮಂದಿ ಗುಣಮುಖರಾಗಿ ಬಿಡುಗಡೆ

ಉತ್ತರಕನ್ನಡ: ಉತ್ತರಕನ್ನಡ‌ ಜಿಲ್ಲೆಯಲ್ಲಿ ಕರೊನಾ ಆರ್ಭಟಿಸುತ್ತಿದೆ. ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ 1208 ಕೋವಿಡ್ ಕೇಸ್ ಪತ್ತೆಯಾಗಿದೆ. ಹಳಿಯಾಳದಲ್ಲಿ ಅತಿಹೆಚ್ಚು ಅಂದರೆ 298 ಪ್ರಕರಣ ಕಾಣಿಸಿಕೊಂಡಿದೆ.

ಉಳಿದಂತೆ ಕಾರವಾರ 97, ಅಂಕೋಲಾ 45, ಕುಮಟಾ 92 , ಹೊನ್ನಾವರ 104, ಭಟ್ಕಳ 94, ಶಿರಸಿ 209, ಸಿದ್ದಾಪುರ 3, ಯಲ್ಲಾಪುರ 127, ಮುಂಡಗೋಡ 26, ಮತ್ತು ಜೋಯ್ಡಾದಲ್ಲಿ 113 ಪ್ರಕರಣ ಕಾಣಿಸಿಕೊಂಡಿದೆ.

ಇದೇ ವೇಳೆ ಭಾನುವಾರ ಕೋವಿಡ್ ಗೆ ಜಿಲ್ಲೆಯಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಮುಂಡಗೋಡಿನಲ್ಲಿ 10, ಶಿರಸಿಯಲ್ಲಿ 4, ಹಳಿಯಾಳದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ.

ಇನ್ನೊಂದೆಡೆ ಗುಣಮುಖರಾಗುತ್ತಿರುವವರ ಪ್ರಮಾಣ‌ ಕೂಡಾ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. 929 ಮಂದಿ ವಿವಿಧ ಆಸ್ಪತ್ರೆಯಿಂದ‌ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್‌ ಕಾರವಾರ

Back to top button