Follow Us On

WhatsApp Group
ಮಾಹಿತಿ
Trending

ಇಳಿಕೆ ಕಾಣುತ್ತಿದೆ ಸೋಂಕು: ಉತ್ತರಕನ್ನಡದ ಜನರು ನೆಮ್ಮದಿಯ ನಿಟ್ಟುಸಿರು

ಕಾರವಾರ: ಉತ್ತರಕನ್ನಡಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಕಂಡಿದೆ. ಭಾನುವಾರ ಜಿಲ್ಲೆಯಾದ್ಯಂತ 193 ಕೇಸ್ ದೃಢಪಟ್ಟಿದೆ. ಕಾರವಾರ 30, ಅಂಕೋಲಾ 8, ಕುಮಟಾ 23, ಹೊನ್ನಾವರ 29, ಭಟ್ಕಳ 13, ಶಿರಸಿ 6, ಸಿದ್ದಾಪುರ 15, ಯಲ್ಲಾಪುರ 12, ಮುಂಡಗೋಡ 21, ಹಳಿಯಾಳ 30 ಮತ್ತು ಜೋಯ್ಡಾದಲ್ಲಿ 6 ಕೇಸ್ ದೃಢಪಟ್ಟಿದೆ.

ಇದೇ ವೇಳೆ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಶಿರಸಿ 2 ಮತ್ತು ಹೊನ್ನಾವರದಲ್ಲಿ ಒಂದು ಸಾವಾಗಿದೆ. 275 ಮಂದಿ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button