ಮಾಹಿತಿ
Trending

ಅಂಕೋಲಾದಲ್ಲಿಂದು ಪಾಸಿಟಿವ್ ಕೇಸ್ 06 : ಸಕ್ರಿಯ 137

ಅಂಕೋಲಾ ಜೂ 13: ತಾಲೂಕಿನಲ್ಲಿ ರವಿವಾರ 6ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು ಒಟ್ಟೂ1 37ಪ್ರಕರಣಗಳು ಸಕ್ರಿಯವಾಗಿದೆ.

ಸೋಂಕು ಮುಕ್ತರಾದ 5 ಜನರನ್ನು ಬಿಡುಗಡೆ ಗೊಳಿಸಲಾಗಿದ್ದು, ಅಂಕೋಲಾ (8), ಕಾರವಾರ (9), ಕುಮಟಾ (3, ಮಣಿಪಾಲ (1), ಮಂಗಳೂರು (3) ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 24 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 07, ಹೋಂ ಐಸೋಲೇಶನ್ ನಲ್ಲಿ 106 ಜನರಿದ್ದಾರೆ. ಈ ವರೆಗೆ ಕೊವಿಡನಿಂದ ತಾಲೂಕಿನಲ್ಲಿ ಒಟ್ಟು 55 ಸಾವಿನ ಪ್ರಕರಣ ದಾಖಲಾಗಿದೆ.

ಯಾವತ್ತೂ ಅಂಕೋಲಾ ತಾಲೂಕಿನ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಈ ಹಿಂದಿನ ಲಾಕ್ ಡೌನ್ ಮಾರ್ಗ ಸೂಚಿಯಲ್ಲಿ ತಿಳಿಸಿದಂತೆ ದಿನಾಂಕ 14-06-2021 ರಿಂದ ಪ್ರಾರಂಭವಾಗುವ ಹೊಸ ಲಾಕ್ ಡೌನ್ ಗೂ ಸಹ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಈ ಹಿಂದೆ ಬೆಳ್ಳಿಗ್ಗೆ 8.00 ರಿಂದ ಮದ್ಯಾಹ್ನ 12.00 ಘಂಟೆಯವರೆಗೆ ಅನುಮತಿಸಲಾದ ಚಟುವಟಿಕೆಗಳನ್ನು ಬೆಳ್ಳಿಗ್ಗೆ 8.00 ರಿಂದ ಮದ್ಯಾಹ್ನ 2.00 ಘಂಟೆಯವರೆಗೆ ಮಾತ್ರ ಅನುಮತಿಸಿದೆ ಎಂದು ತಹಶೀಲ್ದಾರ ಉದಯ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೂಲಕ ನಾಳೆ ಪಟ್ಟಣದ ಎಲ್ಲಾ ತರದ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ವಹಿವಾಟು ನಡೆಸಬಹುದು ಎಂದುಕೊಂಡವರಿಗೆ ಮುಂದಿನ ಆದೇಶದವರೆಗೆ ಕಾಯಬೇಕಾದ ಅನಿವಾರ್ಯತೆಯಿದೆ.ಹಾಗೆಯೇ ಪೇಟೆಯಲ್ಲಿ ತಮಗಿಷ್ಟದ ವಸ್ತುಗಳನ್ನು ಖರೀದಿಸಲು ಅವಕಾಶ ದೊರೆಯ ಬಹುದೆಂಬ ತವಕದಲ್ಲಿರ ಬಹುದಾದ ಕೆಲ ಗ್ರಾಹಕರೂ ಸಹ ಅನಗತ್ಯವಾಗಿ ಪಟ್ಟಣಕ್ಕೆ ಬರದೇ ಕೋವಿಡ್ ಮಾರ್ಗಸೂಚಿ ಪಾಲಿಸಿ, ಆಡಳಿತ ವರ್ಗದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button