ಮಾಹಿತಿ
Trending

ಮಳೆ ತಂದ ಅವಾಂತರ: ಸೇತುವೆ ನಿರ್ಮಾಣ ಸಾಮಗ್ರಿಗಳು ನೀರುಪಾಲು

ಜೊಯಿಡಾ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನದಿಗಳು ಉಕ್ಕಿ ಹರಿದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿ,ಜನಜೀವನ ಅಸ್ತವ್ಯಸ್ತಗೊಂಡಿದೆ. ರಾ.ಹೆದ್ದಾರಿ ಸೇರಿದಂತೆ  ಕೆಲ ಪ್ರಮುಖ ಸಂಪರ್ಕ ಸೇತುವೆಗಳು ಹಾನಿಯಾಗಿ ರಸ್ತೆ ಸಂಚಾರಕ್ಕೆ ತೊಡಕಾಗಿದೆ.        ಇದೇ ವೇಳೆ ಜೊಯಿಡಾ ತಾಲೂಕಿನ ಚಾಂದವಾಡಿ, ಕಾತೇಲಿ, ನಾಗೋಡಾ, ಹಾಗೂ ಕುಂಡಲ್ ಸೇತುವೆಗಳು ನೀರಿನಿಂದ ಮುಳುಗಡೆಯಾಗಿ ಜನಸಂಚಾರ ಕಡಿತಗೊಂಡಿದೆ.                               

ಕಾಳಿ ನದಿಯ ಉಪನದಿ ಪಾಂಡರಿ ನದಿ ಅಪಾಯದ ಮಟ್ಟ ಮೀರಿ ಹರಿದಿದ್ದರಿಂದ ಚಾಂದವಾಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಭಾರಿ ಸೇತುವೆ ನೀರಿನ ರಭಸಕ್ಕೆ ಸಿಕ್ಕು ಅಪಾರ ಹಾನಿ ಸಂಭವಿಸಿದೆ. ದಾಂಡೇಲಿ- ದೂದ್ ಸಾಗರ್ ಮಧ್ಯೆ ಚಾಂದವಾಡಿಯಲ್ಲಿ  ನಿರ್ಮಾಣ ಹಂತದಲ್ಲಿದ್ದ ಬಹುಕೋಟಿ ವೆಚ್ಚದ ಸೇತುವೆ ಕಾಮಗಾರಿ, 2019ರ ಡಿಸೆಂಬರನಲ್ಲಿ ಆರಂಭಗೊಂಡು 2021ರ  ಡಿಸೆಂಬರ ಒಳಗೆ ಪೂರ್ಣಗೊಳ್ಳಬೇಕಿತ್ತು.       

ರಾಜ್ಯದ ವಿವಿಧೆಡೆ ನೂರಾರು ಸೇತುವೆ ನಿರ್ಮಿಸಿ ಹೆಸರುವಾಸಿಯಾಗಿರುವ ಕುಂದಾಪುರದ ಫೀಲಿಪ್ ಡಿಕೋಸ್ತಾ ಕಂಪನಿ ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸುವ ನಿಟ್ಟಿನಲ್ಲಿ,ಭರದಿಂದ ಕಾಮಗಾರಿ ನಡೆಸಿ,ಈಗ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿತ್ತು ಎನ್ನಲಾಗಿದ್ದು,ಆಕಸ್ಮಿಕ ಜಲ ಅವಘಡದಿಂದ ಸೇತುವೆಯ 6 ಗ್ಲೈಡರ್ ಗಳಿಗೆ ಹಾನಿಯಾಗಿ ಕೆಲಸಕ್ಕೆ ಹಿನ್ನಡೆಯಾದಂತಾಗಿದೆ.ಅಲ್ಲದೇ ಕಾಮಗಾರಿ ಪ್ರದೇಶದಲ್ಲಿ ದಾಸ್ತಾನಿಟ್ಟ  ಸೇತುವೆ ನಿರ್ಮಾಣ ಸಾಮಗ್ರಿಗಳು ನೀರುಪಾಲಾಗಿದೆ.ಸಿಬ್ಬಂದಿಗಳ ತಾತ್ಕಾಲಿಕ ವಸತಿ ಶೆಡ್ ಗಳಿಗೂ ಹಾನಿಯಾಗಿದ್ದಲ್ಲದೇ,ಅಕ್ಕಪಕ್ಕದಲ್ಲಿ  ನಿಲ್ಲಿಸಿಡಲಾಗಿದ್ದ ಟಿಪ್ಪರ್ ಲಾರಿ ಮತ್ತಿತರ ವಾಹನಗಳಿಗೆ ನೀರು ನುಗ್ಗಿ ಹೆಚ್ಚಿನ ಹಾನಿ ಸಂಭವಿಸಿದೆ. 

ಭಜಲ್ ಕೋಣಾಂಗ, ಅಸು,ಕ್ಯಾಸಲ್ ರಾಕ್ ಪಂಚಾಯಿತಿಗಳ 20ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 10,000 ಜನರಿಗೆ ಈ ಸೇತುವೆ ನಿರ್ಮಾಣದಿಂದ ಅನುಕೂಲವಾಗುತ್ತಿತ್ತು.  ಬೈಲವಾಲದಲ್ಲಿ ರಾಜ್ಯ ಹೆದ್ದಾರಿ ಮೇಲೆ ನೀರು ಹರಿದಿದ್ದು ರಸ್ತೆ ಸಂಚಾರಕ್ಕೆ ತೊಡಕಾಗಿತ್ತು.ಜಲ ಕಟ್ಟಿ ಗ್ರಾಮದ ಹಲವು ಮನೆಗಳು ಜಲಾವೃತವಾಗುವಂತಾಗಿತ್ತು.ಕ್ಯಾಸಲ್ ರಾಕ್ ನಲ್ಲಿಯೂ  ಹಲವು ಮನೆಗಳು ನೀರಿನಲ್ಲಿ ಮುಳುಗಿದ್ದವು .ಕುಂಬಾರವಾಡ ಗ್ರಾಪಂ ವ್ಯಾಪ್ತಿಯಲ್ಲಿ ಕಾನೇರಿ ನದಿಯ ನೀರು ನುಗ್ಗಿ ಭತ್ತ ಬೆಳೆಯುವ ಬಹುತೇಕ ಗದ್ದೆ ಪ್ರದೇಶಗಳು ಮುಳುಗಡೆಯಾಗಿ, ಕೃತಕ ನದಿಯಂತೆ ಕಂಡುಬರುತ್ತಿತ್ತು.

ಒಟ್ಟಿನಲ್ಲಿ ದಟ್ಟ ಕಾಡು ಹಾಗೂ ನಿಸರ್ಗ ರಮಣೀಯ ಪ್ರದೇಶಗಳಲ್ಲಿ ಒಂದಾದ ಜೊಯಿಡಾ ತಾಲೂಕಿನ ಹೆಚ್ಚಿನ ಪ್ರದೇಶಗಳು ನದಿ ಪ್ರವಾಹ,ಹಾಗೂ ಹೆಚ್ಚಿನ ಮಳೆ ನೀರಿನಿಂದ ಅಪಾರ ಹಾನಿಗೆ ಒಳಗಾಗುವಂತಾಗಿದೆ. ಶಾಸಕ ಆರ್ ವಿ ದೇಶಪಾಂಡೆ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ನೊಂದ ಜನತೆಗೆ ಸಾಂತ್ವನ ಹೇಳಿ,ಹಾನಿ ಸಮೀಕ್ಷೆ ನಡೆಸಿ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ  ನೆರವು ಹಾಗೂ ಪರಿಹಾರ ಕೊಡಿಸುವ ಭರವಸೆ ವ್ಯಕ್ತಪಡಿಸಿದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button