ಹೊನ್ನಾವರ ಮತ್ತು ಕುಮಟಾದಲ್ಲಿ ನಾಳೆ ಎಲ್ಲೆಲ್ಲಿ ಲಸಿಕೆ ಲಭ್ಯವಿದೆ ನೋಡಿ? ಉತ್ತರಕನ್ನಡ ಜಿಲ್ಲೆಯ ಇಂದಿನ ಕೋವಿಡ್ ವಿವರ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 56 ಕೋವಿಡ್ ಕೇಸ್ ದಾಖಲಾಗಿದೆ. ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 46 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಕುಮಟಾದಲ್ಲಿ ನಾಳೆ 800 ಕೋವಾಕ್ಸಿನ್ , 3 ಸಾವಿರ ಕೋವಿಶೀಲ್ಡ್ ಲಭ್ಯ, ಎಲ್ಲೆಲ್ಲೆ ನೋಡಿ?

ಕುಮಟಾದಲ್ಲಿ 800 ಕೋವ್ಯಾಕ್ಸೀನ್ ಮತ್ತು 3000 ಕೋವೀಶೀಲ್ಡ್ ಲಸಿಕೆ ಲಭ್ಯವಿದೆ., ಪ್ರಾಥಮಿಕ ಆರೋಗ್ಯ ಕೇಂದ್ರ ಬಂಕಿಕೊಡ್ಲ, ಪ್ರಾಥಮಿಕ ಆರೋಗ್ಯ ಕೇಂದ್ರ ಗೋಕರ್ಣ, ಬರ್ಗಿ ಹಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಪಡುವಣಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕತಗಾಲ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಗಾಲ, ಕೋನಳ್ಳಿ ಸಭಾಭವನ, ಹೊಲನಗದ್ದೆ ಪಂಚಾಯತ, ಮಿರ್ಜಾನ ಪಂಚಾಯತನಲ್ಲಿ ಲಸಿಕೆ ಲಭ್ಯವಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಮುರೂರು, ಹೆಗಡೆ ಗಂಡುಮಕ್ಕಳ ಶಾಲೆ ಹಾಗೂ ತಣ್ಣೀರಕುಳಿ ಶಾಲೆ, ಸಿದ್ದಿ ವಿನಾಯಕ ಸಭಾಭವನದಲ್ಲಿ ವಾಕ್ಸಿನೇಷನ್‌ ನಡೆಯಲಿದೆ. ನಡೆಯಲಿದೆ. ಎಲ್ಲಾ ಕಡೆಗಳಲ್ಲಿ ಕೋವೀಶೀಲ್ಡ್ ಲಸಿಕೆಯ ಮೊದಲ ಡೋಸ್ ಹಾಗೂ ಎರಡನೇ ಡೋಸ್ ನೀಡಲಾಗುವುದು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊನ್ನಾವರ ತಾಲೂಕಿನಲ್ಲಿ 2,040 ವ್ಯಾಕ್ಸಿನ್ ವಿತರಣೆ: ಎಲ್ಲೆಲ್ಲಿ ನೋಡಿ?

ಹೊನ್ನಾವರ : 1800 ಕೋವಿಶೀಲ್ಡ್, 240 ಕೋವ್ಯಾಕ್ಸಿನ್ ಲಭ್ಯವಿದ್ದು, 50-50 ಮಾದರಿಯಲ್ಲಿ ಪಸ್ಟ್ ಡೋಸ್ ಸೆಕೆಂಡ್ ಡೋಸ್ ವಿತರಣೆ ಮಾಡಲಾಗುವುದು. ಕಾಪಿರೈಟ್ ವಿಸ್ಮಯ ಟಿ.ವಿ. ಕಡೋತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250 ಕೋವಿಶೀಲ್ಡ್, ಹಳದಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 190 ಕೋವಿಶೀಲ್ಡ್, 70 ಕೋವ್ಯಾಕ್ಸಿನ್ ಮತ್ತು ಹೋಸಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250 ಕೋವಿಶೀಲ್ಡ್ ಲಭ್ಯವಿದೆ.

ಅಲ್ಲದೆ, ಗೇರುಸೋಪ್ಪಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಕೋವಿಶೀಲ್ಡ್, ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಕೋವಿಶೀಲ್ಡ್, 30 ಕೋವ್ಯಾಕ್ಸಿನ್ ಲಭ್ಯವಿದೆ.

ಸಂಶಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250 ಕೋವಿಶೀಲ್ಡ್ , ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರ ಮೋಳ್ಕೋಡ ಕಾಸರಕೋಡ ಸೇರಿ 450 ಕೋವಿಶೀಲ್ಡ್ 150 ಕೋವ್ಯಾಕ್ಸಿನ್, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250 ಲಸಿಕೆ ಲಭ್ಯವಿದೆ.

ಅಂಕೋಲಾದಲ್ಲಿ 6 ಹೊಸ ಪಾಸಿಟಿವ್ ಕೇಸ್:

ಅಂಕೋಲಾ: ತಾಲೂಕಿನಲ್ಲಿ ಶುಕ್ರವಾರ 6 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.ಸೋಂಕು ಮುಕ್ತರಾದ 5ಜನರನ್ನು ಬಿಡುಗಡೆಗೊಳಿಸಲಾಗಿದ್ದು, 62 ಸಕ್ರಿಯ ಪ್ರಕರಣಗಳಿವೆ. ವಿವಿಧ ಆಸ್ಪತ್ರೆಗಳಲ್ಲಿ 34 ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು,ಸೋಂಕು ಲಕ್ಷಣವುಳ್ಳ 28 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ 3508 ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟೂ 67 ಸಾವಿನ ಪ್ರಕರಣಗಳು ದಾಖಲಾಗಿದೆ.

ಹೊನ್ನಾವರದಲ್ಲಿ 13 ಕೇಸ್ ದೃಢ

ಹೊನ್ನಾವರ: ತಾಲೂಕಿನಲ್ಲಿ ಇಂದು ಒಟ್ಟು 13 ಹೊಸ ಪ್ರಕರಣ ವರದಿಯಾಗಿದ್ದು,‌ಇದರೊಂದಿಗ ಸಕ್ರಿಯ ಪ್ರಕರಣಗಳು 82ಕ್ಕೆ ಏರಿಕೆಯಾಗಿದೆ. 70 ಜನ ಮನೆಗಳಲ್ಲಿ, 3 ಜನ ತಾಲೂಕಾಸ್ಪತ್ರೆಯಲ್ಲಿ, 6ಜನ ಇತರ ಆಸ್ಪತ್ರೆಯಲ್ಲಿ, 3 ಜನ ಕೊವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಜನ ಕೊವಿಡ್ ನಿಂದ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

ಪ್ರಮುಖ‌ ಸುದ್ದಿಗಳ‌‌ ಲಿಂಕ್

Exit mobile version