ರೋಡ್ ಟ್ಯಾಕ್ಸ್‌& ವಿಮಾ‌ ಕಂತಿನ‌ ವಿನಾಯತಿ ನೀಡಿ ಸರ್ಕಾರಕ್ಕೆ ಸತೀಶ್ ಸೈಲ್ ಆಗ್ರಹ

ಯುನಿಯನ್ ಮುಖಂಡರಿಂದ ಸಮಸ್ಯೆ ಆಲಿಕೆ
ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ

ಪ್ರತಿದಿನ ದುಡಿದು ಕುಟುಂಬ ನಿರ್ವಹಣೆ ಮಾಡಬೇಕಾದ ಲಾರಿ, ಕಾರ್, ಟೆಂಪೋ, ರಿಕ್ಷಾ ಮತ್ತಿತರ ಖಾಸಗಿ ವಾಹನ ಚಾಲಕ ಹಾಗೂ ಮಾಲಕರಿಗೆ ಲಾಕ್‌ಡೌನ್ ಮುಗಿದ ಬಳಿಕವು ಸಂಕಷ್ಟ ತಪ್ಪಿದಂತಿಲ್ಲಾ. ಸಾಲ ಮಾಡಿ ತಮ್ಮ ದಂಧೆ ನಡೆಸಬೇಕಾದ ಅನಿವಾರ್ಯತೆ ಇವರದ್ದು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹತ್ತಾರು ಉತ್ತಮ ಪ್ಯಾಕೇಜ್‌ಗಳನ್ನು ಲಾಕ್‌ಡೌನ್ ನಿಂದ ತೊಂದರೆಗೊಳಗಾದವರಿಗೆ ನೀಡುತ್ತಿರುವುದು ಪ್ರಶಂಸನೀಯ. ಅದರ ಜೊತೆಯಲ್ಲಿ ಲಕ್ಷಾಂತರ ಮಂದಿ ನಾನಾ ರೀತಿಯ ಟ್ರಾನ್ಸ್ಪೋರ್ಟ್ ವ್ಯವಹಾರ ನಂಬಿ ಬದುಕುತ್ತಿದ್ದು, ಅವರಿಗೆಲ್ಲ ರಿಗೂ ಅನುಕೂಲವಾಗುವಂತೆ ಲಾಕ್‌ಡೌನ್ ಅವಧಿಯ ರೋಡ್ ಟ್ಯಾಕ್ಸ್ ರಿಯಾಯತಿ ಮತ್ತು ವಿಮಾ ಕಂತಿನ ವಿನಾಯತಿ ಮೂಲಕ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಟಾಸ್ಕ ಪೋರ್ಸ್ ಸಮತಿ ಅಧ್ಯಕ್ಷ ಮತ್ತು ಮಾಜಿ ಶಾಸಕ ಸತೀಶ ಸೈಲ್ ಸರಕಾರಕ್ಕೆ ಆಗ್ರಹಿಸಿದರು.ಪಟ್ಟಣದ ಟೆಂಪೋ ನಿಲ್ದಾಣ ಬಳಿ, ಕಾರ್, ಟೆಂಪೋ ಮತ್ತು ರಿಕ್ಷಾ ಯೂನಿಯನ್‌ಗಳ ಕೆಲ ಪ್ರಮುಖರಿಂದ, ಲಾಕ್‌ಡೌನ್ ಅವಧಿಯ ಮತ್ತು ಪ್ರಸ್ತುತ ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.


ನಿಮ್ಮೆಲ್ಲರ ಸಂಕಷ್ಟದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಮುಖ್ಯಮಂತ್ರಿ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಪ್ರಮುಖರ ಗಮನಕ್ಕೆ ತರಲಾಗು ವುದು.
-ಸತೀಶ್ ಸೈಲ್, ಮಾಜಿ‌ ಶಾಸಕರು ,‌ಟಾಸ್ಕ್ ಫೋರ್ಸ್ ಸಮಿತಿ ಜಿಲ್ಲಾಧ್ಯಕ್ಷರು

ಈ ಸಂದರ್ಭದಲ್ಲಿ ಟೆಂಪೋ ಯೂನಿಯನ್ ಅಧ್ಯಕ್ಷ ಕೀಶೂರ ಟಿ. ನಾಯ್ಕ(ಬಾಳಾ), ರಿಕ್ಷಾ ಯೂನಿಯನ್ ಅಧ್ಯಕ್ಷ ಬಿ.ಡಿ.ನಾಯ್ಕ, ಪ್ರಮುಖರಾದ ಮಂಜುನಾಥ ಡಿ. ನಾಯ್ಕ ಬೇಳಾಬಂದರ, ರಾಜೇಶ ಮಿತ್ರ ನಾಯ್ಕ ತೆಂಕ ಣಕೇರಿ, ರಾಮಚಂದ್ರ ಡಿ.ನಾಯ್ಕ ಅಗಸೂರು, ಪುರುಷೋತ್ತ ಡಿ. ನಾಯ್ಕ ಶಿರೂರು, ಅರುಣ ನಾಯ್ಕ ನದಿಭಾಗ, ವಸಂತ ನಾಯ್ಕ, ಸಂತೋಷ ನಾಯ್ಕ, ಉದಯ ಗಾಂಕವರ, ಬಸವರಾಜ್ ಈಳಗೇರ, ಮಂಜುನಾಥ ವಿ.ನಾಯ್ಕ, ಉದ್ಯಮಿ ಮೋಹನ ನಾಯ್ಕ ಕಾರವಾರ, ಚಂದ್ರು ನಾಯ್ಕ, ಚಂದ್ರಕಾಂತ ತುಕ್ಕಪ್ಪ ನಾಯ್ಕ, ವಕೀಲ ಗಜಾನನ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version