ಕರೊನಾ ಬಾರದಂತೆ ತಡೆಯೋದು ಹೇಗೆ?

ಕುಮಟಾ: ಆಯುರ್ವೇದ ಪದ್ಧತಿಯಲ್ಲಿ ಕೊರೊನಾ ಸೋಂಕಿಗೆ ಔಷಧಿ ಹಾಗೂ ಚಿಕಿತ್ಸೆ ನೀಡುವ ನಿಖರವಾದ ಪ್ರಕಾರವನ್ನು ತಿಳಿಯಪಡಿಸುವ ಮಾಹಿತಿ ಶಿಬಿರವನ್ನು ಕುಮಟಾ ತಾಲೂಕಿನ ನಾದಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೊರೊನಾ ಸೋಂಕಿಗೆ ಆಯುರ್ವೇದ ಔಷಧಿ ಹಾಗೂ ಚಿಕಿತ್ಸೆ ನೀಡುವ ನಿಖರವಾದ ಪ್ರಕಾರದ ಕುರಿತು ಮಾಹಿತಿ ನೀಡಲು ಆಗಮಿಸಿದ್ದ ಡಾ. ಎಂ.ಎಸ್. ಅವಧಾನಿ ಅವರು ಮಾತನಾಡಿ, ಪ್ರಯೋಗಾಲಯ ಮತ್ತು ನಿರ್ದಿಷ್ಟ ಸಂಖ್ಯೆಯ ರೋಗಿಗಳಲ್ಲಿ ಸಾಬೀತು ಮಾಡದೆ ಈ ರೋಗಕ್ಕೆ ಇಂಥಹದ್ದೆ ಮದ್ದು ಎಂದು ಹೇಳಲಾಗುವುದಿಲ್ಲ. ಸಾಂಕ್ರಾಮಿಕ ರೋಗಗಳು ಜಗತ್ತಿಗೆ ಹೊಸದೇನಲ್ಲ, ಸಾಂಕ್ರಾಮಿಕ ಮತ್ತು ವೈರಸ್ ರೋಗಗಳ ಬಗ್ಗೆ ನಾನು ಬರೆದ ಲೇಖನಗಳು 2003 ಮತ್ತು 2009ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಡೆಂಗ್ಯೂ, ಹಂದಿ ಜ್ವರ ಇತ್ಯಾದಿ ಹಲವು ರೋಗಗಳಿಗೆ ಆಯುರ್ವೇದ ಔಷಧಗಳು ಯಶಸ್ವಿಯಾಗಿದ್ದನ್ನು ಸ್ಮರಿಸಿ ನಾವು ಈ ಹೊಸ ಕರೋನ ವೈರಸ್‌ಅನ್ನು ಯಶಸ್ವಿಯಾಗಿ ಎದುರಿಸಬಹುದು ಎಂದರು.

ದಿನಕ್ಕೆ ಮೂರು ಸಲ ಬಿಸಿ ಅರಿಶಿನ ನೀರಿನಲ್ಲಿ ಗಾರ್ಗಲ್ ಮಾಡಿ, 3-4 ತಾಸುಗಳಿಗೆ ಒಂದು ಸಲ ಎರಡು ಗುಟುಕು ಬಿಸಿ ಬಿಸಿ ನೀರು ಕುಡಿಯಿರಿ. ಮಳೆಯಲ್ಲಿ ನೆನೆದು ಜ್ವರ ತರಿಸಿಕೊಂಡುಮ ವೈದ್ಯರಿಗೂ ಅಧಿಕಾರಿಗಳಿಗೂ ಸುಮ್ಮನೆ ಗೊಂದಲ ಉಂಟಾಗುವಂತೆ ಮಾಡಬೇಡಿ. ಯಾವ ಯಾವುದೋ ಕಷಾಯಮಾಡಿ ಕುಡಿಯಬೇಡಿ. ಅಷ್ಟೇ ಅಲ್ಲದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆಯುರ್ವೇದ ಐದು ಸಾವಿರ ವರ್ಷಗಳ ಹಿಂದೆಯೇ ಎಚ್ಚರಿಸಿದ್ದ ಉಲ್ಲೇಖವಿದೆ.

ಡಾ.ಎಂ.ಎಸ್. ಅವಧಾನಿ, ಆಯುರ್ವೇದಿಕ್ ತಜ್ಞರು

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

[sliders_pack id=”1487″]
Exit mobile version