ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 18 ಕೋವಿಡ್ ಕೇಸ್ ಪತ್ತೆಯಾಗಿದೆ. ಇದೇ ವೇಳೆ ಇಂದು ಜಿಲ್ಲೆಯಾದ್ಯಂತ 23 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 251 ಸಕ್ರಿಯ ಪ್ರಕರಣದಲ್ಲಿ 203 ಜನರು ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 48 ಜನರು ಕೋವಿಡ್ ವಾರ್ಡ್ ನಲ್ಲಿದ್ದಾರೆ.
ಅಂಕೋಲಾದಲ್ಲಿ ಇಂದು 3 ಹೊಸ ಪಾಸಿಟಿವ್ ಕೇಸ್. ನಾಳೆ ತಾಲೂಕಿನಲ್ಲಿ 3400 ಲಸಿಕೆ ಲಭ್ಯತೆ.
ಅಂಕೋಲಾ ಸೆ 26: ತಾಲೂಕಿನಲ್ಲಿ ರವಿವಾರ 3 ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿದೆ. ಸೋಂಕು ಮುಕ್ತರಾದ 2 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಈ ಮೂಲಕ 11 ಸಕ್ರಿಯ ಪ್ರಕರಣಗಳಿವೆ.
ಕ್ರಿಮ್ಸ್ ಕಾರವಾರ, ಮಂಗಳೂರು ಹಾಗೂ ಕುಮಟಾದ ಖಾಸಗಿ ಆಸ್ಪತ್ರೆಗಳಲ್ಲಿ ತಲಾ ಓರ್ವ ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 8 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.
ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3687 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ಒಟ್ಟೂ 72 ಕೋವಿಡ್ ಸಾವಿನ ಪ್ರಕರಣಗಳು ದಾಖಲಾಗಿದೆ.
ಸೆ 27ರ ಸೋಮವಾರ ಬೊಬ್ರುವಾಡಾದ ಶಾದಿಮಹಲ್ ( 400), ಗಾಬಿತವಾಡದ ಅಂಗನವಾಡಿ ( 300), ಕಿ.ಪ್ರಾಶಾಲೆ ಓಕ್ಕಲ ಬೆಳೆಸೆ (100), ಪಾಥಮಿಕ ಆರೋಗ್ಯ ಕೇಂದ್ರಗಳಾದ ಬೆಳಸೆ (740), ರಾಮನಗುಳಿ (430), ಹಿಲ್ಲೂರು (460), ಹಟ್ಟಿಕೇರಿ ಡಿಪೋ ಹತ್ತಿರದ ಅಂಗನವಾಡಿ (340 ), ತಾಲೂಕಾ ಆಸ್ಪತ್ರೆ (620) ಸೇರಿ ಒಟ್ಟೂ 3400 ಡೋಸ್ ಲಸಿಕೆ ಲಭ್ಯತೆಯಿದ್ದು ಸಾರ್ವಜನಿಕರು ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ