
ಸಿದ್ದಾಪುರ: ಬಿಜೆಪಿ ಸಿದ್ದಾಪುರ ಮಂಡಲದ ವತಿಯಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಪಟ್ಟಣದ ಹೊಸಪೇಟೆ ಈಶ್ವರ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಯಿತು. ಅಭಿಯಾನದ ಅಂಗವಾಗಿ ಅ.7 ರ ವರೆಗೆ 20 ದಿನಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ತಾಲ್ಲೂಕು ಬಿಜೆಪಿಯಿಂದ ವಿವಿಧ ಸೇವಾ ಚಟುವಟಕೆ ಕಾರ್ಯಕ್ರಮ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕರ ಸಹಕಾರದೊಂದಿಗೆ ದೇವಾಲಯದ ಆವರಣ ಹಾಗೂ ಕೆರೆಯ ಸುತ್ತಲೂ ಸ್ವಚ್ಚತೆಯನ್ನು ಮಾಡಿದರು.

ಈ ವೇಳೆ ಮಂಡಲದ ಪ್ರಧಾನ ಕಾರ್ಯದರ್ಶಿ ಎಸ್. ಕೆ. ಮೇಸ್ತ, ಜಿಲ್ಲಾ ಕಾರ್ಯದರ್ಶಿ ಗುರುರಾಜ ಶಾನಭಾಗ್, ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮನಾ ಕಾಮತ್, ಪ್ರಧಾನ ಕಾರ್ಯದರ್ಶಿ ಫಾತಿಮಾ ಸಾಬ್, ಯುವಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ರಾಯ್ಕರ್, ಕಾರ್ಯದರ್ಶಿ ಶಿವಕುಮಾರ ಕೊಂಡ್ಲಿ, ಪ್ರಮುಖರಾದ ಪ್ರಶಾಂತ ರೋಖಡೆ, ಸತೀಶ ಕಾಮತ್, ವಿನಾಯಕ ಮಹಾಲೆ, ಹಾಗೂ ಸ್ಥಳೀಯರು ಹಾಜರಿದ್ದರು.
ವಿಸ್ಮಯ ನ್ಯೂಸ್, ಸಿದ್ದಾಪುರ