Follow Us On

WhatsApp Group
ಮಾಹಿತಿ
Trending

ಸ್ವಾತಂತ್ರ್ಯ ಸ್ಮಾರಕ ಭವನದಲ್ಲಿ ಸಚಿವರಿಗೆ ಸನ್ಮಾನ

ಅಂಕೋಲಾ: ತಾಲೂಕಿನ ಸ್ವಾತಂತ್ರ್ಯ ಸ್ಮಾರಕ ಭವನದ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ನಿಮಿತ್ತ ಅರಣ್ಯ ಇಲಾಖೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಅವರನ್ನು ಹಿರಿಯ ವಕೀಲ ಸುಭಾಶ ನಾರ್ವೇಕರ್ ಮತ್ತಿತರ ಪ್ರಮುಖರು ಸನ್ಮಾನಿಸಿ ಗೌರವಿಸಿದರು.
ಪರಿಸರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಗೂ ಮೊದಲು, ಪ್ರವೇಶ ದ್ವಾರದ ಬಳಿ ಸಚಿವರನ್ನು ಸ್ವಾಗತಿಸಿ, ಶಾಲು ಹೊದಿಸಿ, ಖಾದಿ ಹಾರ ಹಾಕಿ ಸನ್ಮಾನಿಸಿ ಗೌರವಿಸಿದ ವಕೀಲ ಸುಭಾಶ ನಾರ್ವೇಕರ್, ಗುರುವಾರವಷ್ಟೇ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ಹೆಬ್ಬಾರ ಅವರಿಗೆ ಶುಭ ಕೋರಿದರು. ಸನ್ಮಾನ ಸ್ವೀಕರಿಸಿದ ಸಚಿವ ಹೆಬ್ಬಾರ ಎಲ್ಲರನ್ನೂ ಆತ್ಮೀಯತೆಯಿಂದ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಉಮೇಶ ಎನ್.ನಾಯ್ಕ, ನಾಗಾನಂದ ಐ.ಬಂಟ, ವಿನೋದ ಶಾನಭಾಗ ಪ್ರಮುಖರಾದ ಭಾಸ್ಕರ ಕಾಶಿನಾಥ ನಾರ್ವೇಕರ್, ರಾಮ ನಾಯಕ, ರಾಜೇಂದ್ರ ನಾಯ್ಕ, ಧಾಮೋದರ ರಾಯ್ಕರ, ಸುಬ್ರಹ್ಮಣ್ಯ ಗಾಂವಕರ, ಶಶಿಧರ ಶೇಣ್ವಿ, ಸುಬ್ರಹ್ಮಣ್ಯ ರೇವಣಕರ್ ಮತ್ತಿತರರು ಉಪಸ್ಥಿತರಿದ್ದು, ಸಚಿವರಿಗೆ ಗೌರವ ಸೂಚಿಸಿದರು.
– ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

Back to top button