Uttara Kannada
Trending

ಸೆಲ್ಪಿ ವಿಥ್ ಮೈ ಪ್ಲಾಂಟ್ ಅಭಿಯಾನ

ಪರಿಸರ ಉಳಿಸುವ ಅಭಿಯಾನಕ್ಕೆ ಆಧುನಿಕತೆಯ ಸ್ಪರ್ಶ

ಸೆಲ್ಪಿ ನೆಪದಲ್ಲಿ ಹುಟ್ಟಿಸಿದ ಪರಿಸರ ಪ್ರೀತಿ

ಹೊನ್ನಾವರ: ನೆಹರು ಯುವ ಕೇಂದ್ರದ ತಾಲ್ಲೂಕಾ ಯುವ ಕರ‍್ಯರ‍್ತರಾದ ಶಿವರಾಜ್ ನಾಯ್ಕ ಇವರ ಮುಂದಾಳತ್ವದಲ್ಲಿ ವೃಕ್ಷ ಸಂಕುಲದ ವೃದ್ಧಿಗೆ ಹಮ್ಮಿಕೊಂಡ ಅಭಿಯಾನವು ಸ್ವಲ್ಪ ವಿಭಿನ್ನವಾಗಿದ್ದು, ಆಧುನಿಕ ಯುಗದಲ್ಲಿ ‌ಹೆಚ್ಚಿರುವ ಸೆಲ್ಪಿ ಟ್ರೆಂಡ್ ಗೆ ತಕ್ಕಂತೆ‌ ಗಿಡಗಳನ್ನು ನೆಟ್ಟು ಅದರೊಂದಿಗೆ ಒಂದು ಸೆಲ್ಫಿ ತೆಗೆದು ಕಳುಹಿಸಿ ಎಂದು ಸಾಮಾಜಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿತ್ತು. ಈ ಅಭಿಯಾನಕ್ಕೆ ನಿರಿಕ್ಷೆಗೂ‌ ಮೀರಿ ಸುಮಾರು 75- 80 ಗಿಡ ನೆಟ್ಟು ಸೆಲ್ಪಿ ತೆಗೆದುಕೊಂಡ ಪೋಟೋ ಬಂದಿದೆ. ಪರಿಸರ ಕಾಳಜಿಯ ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಪ್ರತಿಯೊಬ್ಬರೂ ನೆರಳು ಬೇಕು ಎಂದು ಬಯಸುತ್ತಾರೆ ಆದರೆ ಗಿಡ ನೇಡುವ ಬಗ್ಗೆ ಯಾರೊಬ್ಬರೂ ಆಲೊಚಿಸಲಾರು. ಈ ಸೆಲ್ಫಿ‌ ನೆಪದಲ್ಲಾದರೂ ಒಂದಷ್ಟು ಗಿಡಗಳನ್ನು ನೇಡಲಿ ಎನ್ನುವುದು ಈ ಅಭಿಯಾನದ ಆಶಯ.

Related Articles

Back to top button