ಅಂಕೋಲಾ: ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೋಲೀಸರು ಬಂಧಿಸಿರುವ ಘಟನೆ ತಾಲೂಕಿನ ರಾ.ಹೆ 66 ರ ಹಟ್ಟಿಕೇರಿ ಟೋಲ್ ಬಳಿ ಗುರುವಾರ ಮದ್ಯಾಹ್ನ 3.45 ರ ಸುಮಾರಿಗೆ ನಡೆದಿದೆ.
ಅವರ್ಸಾ – ಸಕಲಬೇಣದ ನಿತಿನ ತಂದೆ ದತ್ತಾ ನಾಯ್ಕ (23) ಬಂಧಿತ ಆರೋಪಿಯಾಗಿದ್ದಾನೆ. ಅಂಕೋಲಾ ಕಡೆಯಿಂದ ಅವರ್ಸಾ ಕಡೆಗೆ ಆಟೋರಿಕ್ಷಾ ( ಕೆ ಎ 30, 9752 ) ದಲ್ಲಿ ಗಾಂಜಾ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿನಡೆಸಿದ್ದಾರೆ.
ಪೊಲೀಸರು ರಿಕ್ಷಾದ ಸೀಟಿನಡಿ ಅಡಗಿಸಿಟ್ಟಿದ್ದ ಅಂದಾಜು ರೂ. 6000 ಮೌಲ್ಯದ 268 ಗ್ರಾಂ. ಗಾಂಜಾ ಮತ್ತು ಗಾಂಜಾ ಸೇದಲು ಬಳಸುವ ಚಿಲುಮೆ, ಸಿಗರೇಟ, ಪೇಪರ್ ಮುಂತಾದ ಸಲಕರಣೆಗಳ ಬಾಕ್ಸನ್ನು ಪತ್ತೆ ಹಚ್ಚಿ, ಅಕ್ರಮ ಗಾಂಜಾ ಸಾಗಾಟಕ್ಕೆ ಬಳಸಿದ ರಿಕ್ಷಾ ವಾಹನವನ್ನು ವಶಪಡಿಸಿಕೊಂಡು, ಬಂಧಿತ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಿತಿನ್ ಈತನಿಗೆ ಗಾಂಜಾ ಪೂರೈಸಿ ಮಾರಾಟ ಮಾಡುವಂತೆ ತಿಳಿಸಿದ್ದ ಎನ್ನಲಾಗಿದ್ದು, ಬಂಧಿತ ಆರೋಪಿತನ ತಮ್ಮ ತುಳಸಿದಾಸ ದತ್ತಾ ನಾಯ್ಕ (20), ತಲೆಮರೆಸಿಕೊಂಡಿದ್ದು,ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು , ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರೇಮನಗೌಡ ಪಾಟೀಲ್ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಸಿಬ್ಬಂದಿ ಭಗವಾನ ಗಾಂವಕರ ವಿಶೇಷ ಕರ್ತವ್ಯ ನಿರ್ವಹಿಸಿದ್ದು, ಮಂಜುನಾಥ ಲಕ್ಮಾಪುರ,ಪಂಡರಿನಾಥ ಮುಂಬೈಕರ್, ಸಾಜು ಪಾಟೀಲ್, ಶಿವಾನಂದ ನಾಗರದಿನ್ನಿ,ಹೊನ್ನಪ್ಪ ವಗ್ಗಣ್ಣನವರ ಪಾಲ್ಗೊಂಡಿದ್ದರು. ಸಮನ್ವಯ ಇಲಾಖೆಗಳ ಪರವಾಗಿ.ಕಂದಾಯ ನಿರೀಕ್ಷಕ ಸಂತೋಷ್ ಹಳಗದ್ದೆ,ಗ್ರಾಮಲೆಕ್ಕಿಗ ಭಾರ್ಗವ ನಾಯಕ, ತಾಲೂಕಾ ಆಸ್ಪತ್ರೆ ವೈದ್ಯ ಮಂಜುನಾಥ್ ಹಾಜರಿದ್ದರು.
ಗಾಂಜಾ ಪ್ರಕರಣಗಳು ಹೆಚ್ಚುತ್ತಲೇ ಇದ್ದು,ಎಸ್ಪಿ ಶಿವಪ್ರಕಾಶ್ ದೇವರಾಜು ಮಾರ್ಗದರ್ಶನದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮಾದಕ ಪದಾರ್ಥಗಳ ಕಳ್ಳಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581