ಕೊಡ್ಲಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿಜಯಂತಿ‌ ಆಚರಣೆ: ಸ್ವಚ್ಚತಾ ಕಾರ್ಯಕ್ರಮ

ಅಂಕೋಲಾ: ಗಾಂಧಿ ಜಯಂತಿ ಅಂಗವಾಗಿ ತಾಲೂಕಿನ ಕೊಡ್ಲಗದ್ದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಶ್ರಮದಾನದ ಮೂಲಕ ಆಚರಿಸಲಾಯಿತು.

ಶಾಲಾ ಆವರಣದಲ್ಲಿ , ಅಂಗನವಾಡಿ ಸುತ್ತ ಮುತ್ತಲಿನ ಜಾಗ, ಕೊಪ್ಪದ ರಸ್ತೆ ಬದಿಯಲ್ಲಿರುವ ಗಿಡಗಂಟಿಗಳನ್ನು ‌ಸ್ವಚ್ಛ ಗೊಳಿಸಲಾಯಿತು,

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರಿ ಮಾರುತಿ ಅಂಬಿಗ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರಿ ನಾಗರಾಜ ಹೆಗಡೆ , ಶ್ರಿ ಚಂದ್ರಕಾಂತ ನಾಯ್ಕ , SDMC ಸದಸ್ಯರು ಹಾಗೂ ಶಾಲಾ ಶಿಕ್ಷಕಿಯವರು , ಅಂಗನವಾಡಿ ಕೇಂದ್ರದವರು , ಧಮ೯ಸ್ಥಳ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸೇವಾ ಪ್ರತಿನಿಧಿ ಗಳು , ಹಾಗೂ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಊರ ನಾಗರಿಕರು ಭಾಗವಹಿಸಿದ್ದರು,

ವಿಸ್ಮಯ ನ್ಯೂಸ್ ಅಂಕೋಲಾ

Exit mobile version