Follow Us On

Google News
Uttara Kannada
Trending

400 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ ವಿಧಾನಪರಿಷತ್ ಸದಸ್ಯ ಘೋಟ್ನೇಕರ್

ಜೊಯಿಡಾ: ತಾಲೂಕಿನ ಬಡವರಿಗೆ ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತಿದ್ದೇನೆ. ಯಾವುದೇ ಸರಕಾರಿ ಹಣದಲ್ಲಿ ಈ ಕಿಟ್ ನೀಡುತ್ತಿಲ್ಲ.ಅರಣ್ಯ ಇಲಾಖೆಯಿಂದ ತಾಲೂಕಿನ ಮೂಲ ನಿವಾಸಿ ಮುಗ್ದ ಜನರ ಮೇಲೆ ದೌರ್ಜನ್ಯ ಹೆಚ್ಚಾಗಿದ್ದು ಅದನ್ನು ನಿಯಂತ್ರಿಸುವ ಅವಶ್ಯಕತೆ ಇದೆ, ಯಾರೂ ಕೂಡಾ ಅರಣ್ಯ ಇಲಾಖೆಗೆ ಹೆದರುವ ಅವಶ್ಯಕತೆ ಇಲ್ಲ.ಅಧಿಕಾರದಲ್ಲಿದ್ದವರು ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನ ಮಾಡುತ್ತಿಲ್ಲ,ಜನರ ಮುಗ್ಧತೆಯನ್ನು ತಮ್ಮ ಬಂಡವಾಳವಾಗಿ ಮಾಡಿಕೊಂಡಿದ್ದಾರೆ, ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೆಕರ್ ಹೇಳಿದರು.

ಅವರು ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಣಶಿ ಹಾಗೂ ದುಧಗಾಳಿಯಲ್ಲಿ ಉಳವಿ,ಅಣಶಿ ಹಾಗೂ ಗುಂದ ಘೋಟ್ನೆಕರ ಅಭಿಮಾನಿ ಬಳಗ, ಸಪ್ತಸ್ವರ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಸುಮಾರು 400 ಬಡ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.

ಅಣಶಿ ಕಾರವಾರ ಮಾರ್ಗದಲ್ಲಿ ಮೊದಲಿನ ಬಸಗಳ ಸಂಚಾರ ಬಂದ ಇರುವುದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಜೊತೆ ಚರ್ಚಿಸಿ ಸಾರಿಗೆ ಬಸ್ಸುಗಳನ್ನು ಪುನಃ ಪ್ರಾರಂಭಿಸುವ ಬಗ್ಗೆ ಪ್ರಯತ್ನ ಮಾಡುತ್ತೇನೆ.ಕುಂಬ್ರೀ ಜಮೀನು ಹೊಂದಿರುವ ಇಲ್ಲಿನ ಮೂಲ ನಿವಾಸಿಗಳು ಸಾಕಷ್ಟು ತೊಂದರೆಯಲ್ಲಿದ್ದು,ಈ ಜಮೀನು ಅವರಿಗೆ ಸಿಗುವಂತಾಗಬೇಕು. ಈ ಬಗ್ಗೆ ನಾನು ಪ್ರಯತ್ನ ಮಾಡುತ್ತಿದ್ದೇವೆ. ಕುಣಬಿಗಳನ್ನು ಗೊವಾ ರಾಜ್ಯದಲ್ಲಿ ಎಸ್.ಟಿ ಗೇ ಸೇರಿಸಲಾಗಿದೆ. ಆದರೆ ಇದು ನಮ್ಮಲ್ಲಿ ಆಗಿಲ್ಲ. ಈ ಬಗ್ಗೆ ಕೇಂದ್ರ ಸರಕಾರ ಅನುಮೋದನೆ ಕೊಟ್ಟರೆ ಕೆಲಸ ಆಗುತ್ತದೆ ಎಂದರು.

ಕಾಳಿ ಬ್ರಿಗೇಡ್ ಸಂಚಾಲಕ ರವಿ ರೇಡ್ಕರ ಮಾತನಾಡಿ ಜೊಯಿಡಾ ಜನರು ಅರಣ್ಯ ಇಲಾಖೆಯಿಂದ ಸಾಕಷ್ಟು ತೊಂದರೆಯಲ್ಲಿ ಇದ್ದಾರೆ. ಯಾವತ್ತೂ ಜನರ ಸಂಪರ್ಕಕ್ಕೆ ಸಿಗುವ ಜನಪ್ರತಿನಿಗಳು ನಮ್ಮ ಜನರಿಗೆ ಅವಶ್ಯವಾಗಿದ್ದಾರೆ. ವಸಂತ ಅಸ್ನೋಟಿಕರ ರೀತಿ ಬಡವರಿಗೆ ಸಹಾಯ ಮಾಡಿದಂತೆ ಘೋಟ್ನೇಕರ ಕೂಡಾ ಜನರ ಸೇವೆಗೆ ಸಿದ್ದರಿದ್ದಾರೆ ಎಂದರು.

Back to top button