Follow Us On

WhatsApp Group
Uttara Kannada
Trending

ಜಿಲ್ಲೆಯ ಅತ್ಯಂತ ಕ್ರಿಯಾಶೀಲ ಸಾಹಿತ್ಯಾತ್ಮಕ ಸಂಸ್ಥೆ ನಿನಾದ – ಶಂಕರ್ ನಾಯ್ಕ

ಭಟ್ಕಳ: ಭಟ್ಕಳದ ನಿನಾದ ಸಾಹಿತ್ಯ ಸಂಗೀತ ಸಂಚಯವು ಜಿಲ್ಲೆಯಲ್ಲಿಯೇ ಸಾಹಿತ್ಯ ಹಾಗೂ ಸಂಗೀತ ಚಟುವಟಿಕೆಯನ್ನು ವಿನೂತನ ಹಾಗೂ ವಿಸಿಷ್ಟವಾಗಿ ನಡೆಸುತ್ತ ಬರುತ್ತಿರುವ ರಾಜಕೀಯೆತರ ಸಂಘಟನೆಯಾಗಿದೆ ಎಂದು ಕಸಾಪ ನಿಕಟಪೂರ್ವ ಸಾಹಿತ್ಯ ಅಧ್ಯಕ್ಷರಾದ ಶಂಕರ್ ಕೆ ನಾಯ್ಕ ಅವರು ನುಡಿದರು.ಅವರು ವೆಂಕ್ಟಾಪುರದ ನೀರಕಂಠದಲ್ಲಿರುವ ಮಠದ ಶ್ರೀ ಸಿದ್ದಿವಿನಾಯಕ ದೇವಾಲಯದಲ್ಲಿ  ನಿನಾದ ಸಾಹಿತ್ಯ ಸಂಗೀತ ಸಂಚಯವು ಹಮ್ಮಿಕೊಂಡ ನಿನಾದ   ದಸರಾ ಕವಿಗೋಷ್ಠಿಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.

ಕರೋನಾ ಸಂಕಷ್ಟದ ಸಮಯದಲ್ಲಿ ಯಾವುದೇ ಸಾಹಿತ್ಯ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ ಮುಂದಿನ ದಿನದಲ್ಲಿ ನಿನಾದ ಸಹಯೋಗದೊಂದಿಗೆ ಅನೇಕ ಕಾರ್ಯಕ್ರಮ ತಾಲೂಕಿನಲ್ಲಿ ಹಮ್ಮಿಕೊಳ್ಳುವ ಬಗ್ಗೆ ಆಶಯ ವ್ಯಕ್ತಪಡಿಸಿದರು. ಕವಿಗಳ ಕವಿತೆಗಳ ಬಗ್ಗೆ ಮೆಚ್ಚುಗೆಯ ಮಾತನಾಡಿ ವಿಮರ್ಶಿಸುತ್ತಾ ತಮ್ಮದೇ ಸಂಕಲನದ ಕವಿತೆಗಳನ್ನು ವಾಚಿಸಿದರು.

ನಿನಾದ ಸಂಚಾಲಕ ಉಮೇಶ ಮುಂಡಳ್ಳಿ ಮಾತನಾಡುತ್ತಾ ನಿನಾದ ರಾಜ್ಯಮಟ್ಟದ ಅನೇಕ ಸ್ಪರ್ಧಾ ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕ ಲಾಕ್ಡೌನ್ ಅವದಿಯಲ್ಲಿ ಯಶಸ್ವಿಯಾಗಿ  ನಡೆಸಿದ್ದು ಮತ್ತೆ ಸಂಗೀತ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳುವ ವಿಚಾರ ತಿಳಿಸಿದರು.  ಸುಗಮ ಸಂಗೀತ ಕಥೆ ಕವನ ಬರೆಯಲು ಆಸಕ್ತಿಯುಳ್ಳ ಮಕ್ಕಳಿಗಾಗಿ  ಸಾಹಿತ್ಯ ಕಮ್ಮಟ ಆಯೋಜಿಸುವ ಯೋಚನೆ ಮಾಡಿದ್ದೇವೆ ಎಂದರು. ನಂತರ ತಮ್ಮ  ಅವ್ವ ಗಂಗಾವಳಿ ಕವಿತೆ ವಾಚಿಸಿದರು.

ನಿವೃತ ಯೋದರಾದ ಎಂ.ಡಿ.ಪಕ್ಕಿಯವರು ಕರೋನ ಸಮಯದ ತಲ್ಲಣಗಳ ಬಗ್ಗೆ ತಮ್ಮ ಸ್ವರಚಿತ ಕವಿತೆ ವಾಚಿಸಿದರು. ಹೊನ್ನಾವರದ ಆರಕ್ಷರು ಕವಿಗಳಾದ ಮಂಜುನಾಥ ನಾಯ್ಕ ಯಲ್ವಡಿಕವೂರ ,ಶಿಕ್ಷಕಿ ರೇಷ್ಮಾ ಉಮೇಶ, ಶಿಕ್ಷಕಿ ಸುಮಲತಾ ನಾಯ್ಕ,  ದೇವಿದಾಸ ನಾಯ್ಕ, ತಮ್ಮ ಸ್ವರಚಿತ  ಕವಿತೆಗಳನ್ನು ವಾಚಿಸಿದರು.ಈ ಸಂದರ್ಭದಲ್ಲಿ ಸಿದ್ದಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ನಿಕಟಪೂರ್ವ ಸಾಹಿತ್ಯ ಅಧ್ಯಕ್ಷರಾದ ಶಂಕರ ನಾಯ್ಕ ಹಾಗೂ ನಿನಾದ ಸಂಚಾಲಕ ಉಮೇಶ ಮುಂಡಳ್ಳಿ ಅವರನ್ನು ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮೊದಲು ಕುಮಾರಿ ಸಾರಿಕಾ ದೇವಿದಾಸ ನಾಯ್ಕ ಪ್ರಾರ್ಥಿಸಿದರು. ಶಿಕ್ಷಕ ದೇವಿದಾಸ ನಾಯ್ಕ ಸ್ವಾಗತಿಸಿದರು ,ಯೋಗೇಶ ಮೊಗೆರ ವಂದಿಸಿದರು.

Back to top button