ಮಾಹಿತಿ
Trending

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಜಗದೀಶ್ ಭಟ್ ನೇಮಕ

ಕಾಲೇಜುದಿನಗಳಲ್ಲಿ ಎಬಿವಿಪಿಯಲ್ಲಿ ಸಕ್ರೀಯ
ಕುಮಟಾ ಬಿಜೆಪಿಘಟಕದಲ್ಲಿ ಖಜಾಂಚಿಯಾಗಿ ಸೇವೆ

ಕುಮಟಾ: ಕುಮಟಾ ತಾಲೂಕಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಯುವ ಉತ್ಸಾಹಿ ಸಂಘಟಕ, ಉದ್ಯಮಿ ದಿವಗಿಯ ಜಗದೀಶ ಎಸ್. ಭಟ್ ಅವರು ನೇಮಕರಾಗಿದ್ದಾರೆ. ಕಾಲೇಜು ದಿನಗಳಲ್ಲಿ ಎಬಿವಿಪಿಯಲ್ಲಿ ಕಾರ್ಯ ನಿರ್ವಹಿಸಿ, ಶಾಸಕ ದಿನಕರ ಶೆಟ್ಟಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಕುಮಟಾ ತಾಲೂಕು ಬಿಜೆಪಿ ಘಟಕದಲ್ಲಿ ಖಜಾಂಚಿಯಾಗಿಯೂ ಸಹ ಕಾರ್ಯ ನಿರ್ವಹಿಸಿದ್ದರು. ಪಕ್ಷ ಸಂಘಟನೆಯಲ್ಲಿ ಜಗದೀಶ ಭಟ್ ರವರ ಕಾರ್ಯ ವೈಖರಿಯನ್ನು ಪರಿಗಣಿಸಿದ ಪಕ್ಷದ ಮುಖಂಡರು ಇದೀಗ ಕುಮಟಾ ತಾಲೂಕ ಯುವ ಮೋರ್ಚಾದ ಅಧ್ಯಕ್ಷನ್ನಾಗಿ ಜಗದೀಶ ಅವರನ್ನು ನೇಮಕ ಮಾಡಿದ್ದಾರೆ.

ತಾಲೂಕಾ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜಕೀಯ ಗುರುಗಳಾದ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರಿಗೆ, ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯ್ಕ ರವರಿಗೆ, ಮಂಡಲಾಧ್ಯಕ್ಷರಾದ ಹೇಮಂತಕುಮಾರ ಗಾಂವಕರ ರವರಿಗೆ ಮತ್ತು, ಪಕ್ಷದ ಹಿರಿ-ಕಿರಿಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪ್ರೀತಿ ಪೂರ್ವಕ ಧನ್ಯವಾದಗಳು. ಕ್ರೀಯಾಶೀಲತೆ ಹಾಗೂ ಸೃಜನಶೀಲತೆಯೊಂದಿಗೆ ಪಕ್ಷದ ಏಳಿಗೆಗಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ವಿಶ್ವಾಸ ನೀಡುತ್ತೇನೆ.

-ಜಗದೀಶ ಎಸ್. ಭಟ್, ಯುವ ಮೊರ್ಚಾ ಅಧ್ಯಕ್ಷರು, ಕುಮಟಾ

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ, ಕುಮಟಾ

[sliders_pack id=”1487″]

Back to top button