Uttara Kannada
Trending

ಭಟ್ಕಳದಲ್ಲಿ ಲಾಕ್ ಡೌನ್ ಸಡಿಲ|ಅಂಗಡಿ ತೆರೆಯಲು ಸಮ‌ಯ ಹೀಗಿದೆ ನೋಡಿ

ಭಟ್ಕಳ: ನಾಳೆಯಿಂದ ಭಟ್ಕಳ ತಾಲೂಕಿನಾದ್ಯಂತ ಮುಂಜಾನೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅಂಗಡಿ ತೆರೆಯಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ‌
ಈ ಹಿಂದೆ ಮುಂಜಾನೆ 8 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುಮತಿ ಹೊರಡಿಸಲಾಗಿತ್ತು. ಆದರೆ ನಾಳೆಯಿಂದ ಮುಂಜಾನೆ 7 ರಿಂದ ಸಂಜೆ 7 ಗಂಟೆಯವರೆಗೆ ತಾಲೂಕಿನ ಪುರಸಭೆ ಹಾಗೂ ಪಟ್ಟಣ ಪಂಚಾಯಿತ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟು ತೆರೆಯಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಹೊಟೇಲ್ ಗಳಿಗೂ ಕೂಡ ಈ ಸಮಯ ನಿಗದಿಯಾಗಿದೆ. ಆದರೆ ಹೊಟೇ್ ನಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ನೀಡಲಾಗಿದೆ.
ವಿಸ್ಮಯ ನ್ಯೂಸ್ ,‌ಉದಯ್ ಎಸ್ ನಾಯ್ಕ ಭಟ್ಕಳ

Back to top button