Uttara Kannada
Trending

ಆರ್.ಎನ್.ನಾಯಕ ನಿವಾಸಕ್ಕೆ ಸಚಿವರ ಭೇಟಿ

ಅಂಕೋಲಾ: ವಿಶ್ವ ಪರಿಸರ ದಿನಾಚರಣೆ, ಇಂದಿರಾ ಕ್ಯಾಂಟೀನ ಉದ್ಘಾಟನೆ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿ ಸಿಲು ಅಂಕೋಲಾಕ್ಕೆ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಕಾರ್ಮಿ ಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಅವರು ಕಾರ್ಯಕ್ರಮ ಮುಗಿಸಿ, ಕೆ.ಸಿ.ರಸ್ತೆಯಲ್ಲಿರುವ ದಿ. ಆರ್.ಎನ್.ನಾಯಕ ಅವರ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.
ಸಚಿವ ಶಿವರಾಮ ಹೆಬ್ಬಾರ, ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಮತ್ತು ಸ್ಥಳೀಯ ಪ್ರಮುಖರನ್ನು, ಉದ್ಯಮಿ ಮಯೂರ ನಾಯಕ, ತಾಯಿ ಲತಾ ಆರ್.ನಾಯಕ, ಪತ್ನಿ ಡಾ. ಶೃತಿ ನಾಯಕ ಮತ್ತು ಕುಟುಂಬಸ್ಥರು ತಮ್ಮ ಮನೆಗೆ ಪ್ರೀತಿ ಆದರದಿಂದ ಬರಮಾಡಿಕೊಂಡರು.
ಚಹಾ ಮತ್ತು ಸಿಹಿ ಸೇವಿಸಿ ಕೆಲ ವೇಳೆ ಕಳೆದ ಹೆಬ್ಬಾರ, ಈ ಹಿಂದೆ ಆರ್.ಎನ್.ನಾಯಕ ಅವರ ಒಡ ನಾಟದ ನೆನಪನ್ನು ಮೆಲಕುಹಾಕಿ, ಕುಟುಂಬ ವರ್ಗದವರು ನೂರ್ಕಾಲ ಚೆನ್ನಾಗಿ ಬಾಳುವಂತೆ ಹರಸಿದರು. ಜೂನ್ 4 ರಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವ ಶಿವರಾಮ ಹೆಬ್ಬಾರರವರಿಗೂ ದೇವರು ಇನ್ನಷ್ಟು ಆಯುಷ್ಯ ಕೀರ್ತಿ ದಯಪಾಲಿಸಲೆಂದು ಮಯೂರ ನಾಯಕ ಶುಭಾಶಯ ಹಾರೈಸಿದರು. ನಂತರ ಸಚಿವರು ಕಾರವಾರದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ತೆರಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಗದೀಶ ಜಿ.ನಾಯಕ ಮೊಗಟಾ, ಭಾಸ್ಕರ ಕೇ.ನಾರ್ವೇಕರ್, ರಾಜೇಂದ್ರ ನಾಯ್ಕ, ನಾಗೇಂದ್ರ ಸಿ. ನಾಯ್ಕ, ರಾಘವೇಂದ್ರ ಭಟ್, ಬಿಂದೇಶ ನಾಯಕ ಹಿಚ್ಕಡ, ಚೇತನ ನಾಯಕ ಹಿಚ್ಕಡ, ಸಂಜಯ ನಾಯ್ಕ ಭಾವಿಕೇರಿ, ಉದಯ ವಾಮನ ನಾಯಕ, ಜಯಾ ಬಾಲಕೃಷ್ಣ ನಾಯ್ಕ, ನಾಗೇಶ ನಾಯ್ಕ ಆಚಾ, ಅನುರಾಧ ಮಹೇಕರ್, ಮಹೇಶ ನಾಯ್ಕ ಅವರ್ಸಾ, ಸರಿತಾ ಹರಿ ಕಂತ್ರ, ತಾರಾ ಗಾಂವಕರ ಮತ್ತಿತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

Back to top button