Uttara Kannada
Trending

ಡಿ.ಸಿ.ಆರ್.ಬಿ, ಡಿ.ವೈ.ಎಸ್.ಪಿಯಾಗಿ ಶಿವಾನಂದ ಛಲವಾದಿ

ಕಾರವಾರ: ಜಿಲ್ಲಾ ಅಪರಾಧ ದಾಖಲಾತಿ ವಿಭಾಗದ ಪೋಲೀಸ್ ಉಪ ಅಧೀಕ್ಷಕರಾಗಿ ಶಿವಾನಂದ ಎಚ್.ಛಲವಾದಿ ಜೂನ್10, ಅಧಿಕಾರ ಸ್ವೀಕರಿಸಿದರು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಹನುಮಂತಪ್ಪ ಮತ್ತು ನೀಲವ್ವ ದಂಪತಿಗಳಿಗೆ ಜೂನ್1,1976ರಂದು ಮಗನಾಗಿ ಜನಿಸಿದರು. ತಮ್ಮ ಊರಿನಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ, ನಂತರ ಧಾರವಾಡದ ಕರ್ನಾಟಕದ ಕಾಲೇಜ್‍ನಲ್ಲಿ ಪಿಯುಸಿ ಮತ್ತು ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು.
ಧಾರವಾಡ ವಿಶ್ವವಿಧ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಲ್ಲದೇ,
NET Examನಲ್ಲೂ ಪಾಸಾಗಿದ್ದಾರೆ.ಎಗ್ರಿಕಲ್ಚರ್ ಎಕ್ಷಪೋಟ್ರ್ಸ್ ಆಫ್ ಇಂಡಿಯನ್ ಎಕೊನೊಮಿಕ್ ಎನಲೈಸಿಸ್ ಎಂಬ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪಡೆದಿರುತ್ತಾರೆ.
2001-02 ನೇ ಸಾಲಿನಲ್ಲಿ ಮೈಸೂರಿನ ಕರ್ನಾಟಕ ಪೋಲೀಸ್ ಅಕಾಡೆಮಿಯಲ್ಲಿ ಪ್ರಾರಂಭಿಕ ತರಬೇತಿ ಪಡೆದು 2002-03ರಲ್ಲಿ ತುಮಕೂರಿನಲ್ಲಿ ಪ್ರಾಯೋಗಿಕ ತರಬೇತಿ ಮುಗಿಸಿರುತ್ತಾರೆ. 2004-05ನೇ ಸಾಲಿನಲ್ಲಿ ಗುಲ್ಬರ್ಗಾ ಜಿಲ್ಲೆಯ ಆಳಂದದಲ್ಲಿ ಪಿ.ಎಸ್.ಐ ಆಗಿ ಸೇವೆ ಆರಂಭಿಸಿದ ಇವರು ನಂತರ ಬೆಳಗಾವಿ ಜಿಲ್ಲೆಯ ಕುಡುಚಿ ಮತ್ತು ಗದಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ.
2007ರಲ್ಲಿ ಪೋಲೀಸ್ ನಿರೀಕ್ಷಕರಾಗಿ ಪದೋನ್ನತ್ತಿ ಪಡೆದು ಖಾನಾಪುರದ ಪೋಲೀಸ್ ತರಬೇತು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದರು. ತದನಂತರ ಬಳ್ಳಾರಿ, ಕಾರವಾರ ಜಿಲ್ಲೆಯ ಅಂಕೋಲಾ, ಹಳೆ ಹುಬ್ಬಳ್ಳಿ, ಧಾರವಾಡ ಶಹರ, ಹುಬ್ಬಳ್ಳಿ ಶಹರ ಠಾಣೆಗಳಲ್ಲಿ ಸೇವೆ ಸಲ್ಲಿಸಿ 2018ರಿಂದ ಮುಂಡಗೋಡ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅಂಕೋಲಾ ಮತ್ತು ಮುಂಡಗೋಡ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಜಿಲ್ಲೆಯ ಜನತೆಗೆ ಪರಿಚಿತರಾಗಿರುವಶಿವಾನಂದ ಛಲವಾದಿಯವರು, ಇಂಪಾದ ಹಾಡುಗಾರಿಕೆಯ ಮೂಲಕವು ಜನಮನ ಸೂರೆಗೊಂಡವರು. ನಗುಮುಖದ ಸಜ್ಜನ ಅಧಿಕಾರಿಯ ಸೇವೆ ಈ ಜಿಲ್ಲೆ ಮತ್ತು ಇಲಾಖೆಗೆ ಕೀರ್ತಿ ತರುವಂತಾಗಲಿ ಎನ್ನುವುದು ಹಿತೈಷಿಗಳ ಹಾರೈಕೆಯಾಗಿದೆ.

-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Back to top button