ಮಾಹಿತಿ
Trending

ಜಿಲ್ಲೆಯಲ್ಲಿಂದು ಮತ್ತೆ ಕರೊನಾ ಪ್ರತ್ಯಕ್ಷ

ಕಾರವಾರ : ಜಿಲ್ಲೆಯಲ್ಲಿ‌ ನಾಲ್ಕುದಿನಗಳ ಬಿಡುವಿನ ಬಳಿಕ ಕರೊನಾ ಮತ್ತೆ ಪ್ರತ್ಯಕ್ಷವಾಗಿದೆ. ಜಿಲ್ಲೆಯಲ್ಲಿ ಇಂದು 3 ಕರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 99ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ದಿಂದ ವಾಪಸ್ಸಾದ ಮೂವರಲ್ಲಿ ಕೋವಿಡ್-19 ಪಾಸಿಟಿವ್ ದೃಢವಾಗಿದೆ. ಹಳಿಯಾಳ ಮೂಲದ 21 ವರ್ಷದ ಯುವತಿ, ದಾಂಡೇಲಿಯ 34 ವರ್ಷದ ವ್ಯಕ್ತಿ ಹಾಗೂ 24 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದೇ ವೇಳೆ, ಸಿದ್ಧಾಪುರ ಮೂಲದ ಇಬ್ಬರು ಯುವತಿಯರು ಓರ್ವ ಮಹಿಳೆ ಗುಣಮುಖರಾಗಿ ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ್ ನಿಂದ ಇಂದು ಬಿಡುಗಡೆಗೊಂಡಿದ್ದಾರೆ.

Back to top button