Follow Us On

WhatsApp Group
Uttara Kannada
Trending

ಸೈಲ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಗೋವಾದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸತೀಶ ಸೈಲ್ ಒಪ್ಪಿಗೆ.

ಕಾರವಾರ :ಕರ್ನಾಟಕ ಎಸ್.ಎಸ್ ಎಲ್.ಸಿ ಬೋರ್ಡ್ ವಾರ್ಷಿಕ ಪರೀಕ್ಷೆ ಬರೆಯಲಿರುವ ಗೋವಾದ ರಾಜ್ಯದ ವಾಸ್ಕೋ ಪ್ರದೇಶದ ಎರಡು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ತಮ್ಮ ವಾರ್ಷಿಕ ಪರೀಕ್ಷೆ ಬರೆಯಲು ಮಾಜಿ ಶಾಸಕ ಸತೀಶ ಸೈಲ್ ಮಾಜಾಳಿಯಲ್ಲಿರುವ ತನ್ನ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸ್ಥಳಾವಕಾಶ ನೀಡಲು ಒಪ್ಪಿಗೆ ನೀಡಿದ್ದಾರೆ.
ವಾಸ್ಕೋ ದಲ್ಲಿರುವ ಎರಡು ಪ್ರೌಢ ಶಾಲಾ ಎಸ್.ಎಸ್.ಎಲ್.ಸಿ ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಕರ್ನಾಟಕ ಎಸ್.ಎಸ್.ಎಲ್.ಸಿ ಬೋರ್ಡ್ ಪರೀಕ್ಷೆಯನ್ನು ಮೊದಲಿನಿಂದಲೂ ಕಾರವಾರ ತಾಲೂಕಿನ ಉಳಗಾ ಮಹಾಸತಿ ವಿದ್ಯಾಸಂಸ್ಥೆ ಯಲ್ಲಿ ಬರೆಯುತಿದ್ದು, ಈ ವರ್ಷ ಮಾತ್ರ ಕೋವಿಡ್ 19 ನಿಂದಾಗಿ ಅತಂತ್ರ ಸ್ಥಿತಿಯಲ್ಲಿತ್ತು. ಒಂದೆಡೆ ಉಳಗಾ ಗ್ರಾಮದ ಜನರು ಗೋವಾ ಕೋವಿಡ್ -19 ರೆಡ್ ಜೋನ್ ವಿದ್ಯಾರ್ಥಿಗಳು ಸ್ಥಳೀಯ ವಿದ್ಯಾರ್ಥಿಗಳೊಡನೆ ಬೆರೆತು ಪರೀಕ್ಷೆ ಬರೆಯುವ ಕುರಿತು ಆತಂಕ ಗೊಂಡಿದ್ದರೆ, ಮತ್ತೊಂದೆಡೆ ಗೋವಾ ಕನ್ನಡ ಮೀಡಿಯಂ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆ ಯಲ್ಲಿತ್ತು.
ಈ ಕುರಿತು ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ರವರು ಮಾಜಿ ಶಾಸಕ ಸತೀಶ ಸೈಲ್ ರವರೊಡನೆ ದೂರವಾಣಿ ಮುಖಾಂತರ ಮಾತನಾಡಿ ಗೋವಾದ ವಿದ್ಯಾರ್ಥಿಗಳಿಗೆ ಮಾಜಾಳಿಯಲ್ಲಿ ಇರುವ ಸೈಲ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಈ ವರ್ಷದ ಪರೀಕ್ಷೆ ನಡೆಸಲು ಸ್ಥಳಾವಕಾಶ ಮಾಡಿ‌ ಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕ ವಾಗಿ ಸ್ಪಂದಿಸಿದ ಮಾಜಿ ಶಾಸಕರು ಉಳಗಾ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿ ಯಿಂದ ಮತ್ತು ಗೋವಾ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿ ಯಿಂದ ತಮ್ಮ ಒಪ್ಪಿಗೆಯನ್ನು ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿರುವರು. ಈ ಹಿಂದೆ ಇದೇ ವರ್ಷ ಗೋವಾ ರಾಜ್ಯ ದಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುವ ಕರ್ನಾಟಕದ ಈ ಗಡಿ ಭಾಗದ ವಿದ್ಯಾರ್ಥಿಗಳಿಗೆ ಗೋವಾ ಎಸ್.ಎಸ್.ಎಲ್.ಸಿ ಬೋರ್ಡ್ ನವರು ಮಾಜಾಳಿ ಯೂನಿಯನ್ ಹೈ ಸ್ಕೂಲ್ ನಲ್ಲಿ ಪರೀಕ್ಷೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮಾಜಿ ಶಾಸಕ ಸತೀಶ ಸೈಲ್ ರವರ ಈ ನಿರ್ಧಾರವನ್ನು ಉಳಗಾ ಗ್ರಾಮದ ಸುತ್ತ ಮುತ್ತಲಿನ ಜನರು ಶ್ಲಾಘಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ, ಅಂಕೋಲಾ

[sliders_pack id=”1487″]

Back to top button