ಹೊನ್ನಾವರ: 1
ಭಟ್ಕಳ: 1
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಜೂನ್ 21ರಂದು ಮಹಾರಾಷ್ಟ್ರ ದಿಂದ ಹೊನ್ನಾವರಕ್ಕೆ ಆಗಮಿಸಿ ಖಾಸಗಿ ಹೊಟೆಲ್ ನಲ್ಲಿ ಕ್ವಾರಂಟೈನಗೆ ಒಳಗಾಗಿದ್ದ ಬಳ್ಕೂರು ಮೂಲದ ಒಂದೇ ಕುಟುಂಬದ ಮೂವರ ಪೈಕಿ ತಂದೆ ಮಗನಿಗೆ ಶುಕ್ರವಾರ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ಈಗ ಸೋಂಕಿತನ ಪತ್ನಿಗೂ ಕರೊನಾ ದೃಢಪಟ್ಟಿದೆ. ಈ ಮೂಲಕ ಹೊನ್ನಾವರ ತಾಲೂಕಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಇನ್ನೊಂದೆಡೆ ಭಟ್ಕಳದಲ್ಲಿ ಒಂದು ಕರೊನಾ ಪ್ರಕರಣ ದಾಖಲಾಗಿದ್ದು, ಮುಗ್ದಮ್ ಕಾಲೋನಿಯ ವ್ಯಕ್ತಿಯೊಬ್ಬನಿಗೆ ಸೋಂಕು ದೃಢಪಟ್ಟಿದೆ. ಈತ ಜೂನ್ 23 ರಂದು ಮಹಾರಾಷ್ಟ್ರ ರೈಲಿನ ಮೂಲಕ ಭಟ್ಕಳಕ್ಕೆ ಬಂದಿದ್ದು ಗಂಟಲು ದ್ರವ ಪರೀಕ್ಷೆ ನಡೆಸಿ ಇಲ್ಲಿನ ಸೋನಾರಾಕೇರಿ ಕಿತ್ತೂರು ರಾಣಿ ಚನ್ನಮ್ಮ ಹಾಸ್ಟೆಲ್ ನಲ್ಲಿ ಸರ್ಕಾರಿ ಕ್ವಾರಂಟೈನಲ್ಲಿದ್ದ. ಈ ವ್ಯಕ್ತಿಗೆ ಮೊದಲ ಹಂತದ ಗಂಟಲು ದ್ರವ ಪರೀಕ್ಷೆಯಲ್ಲೇ ಕರೋನಾ ಸೋಂಕು ಇರುವುದು ಪತ್ತೆಯಾಗಿದೆ. ಈತ ಆಂಧ್ರಪ್ರದೇಶದಿಂದ ವಾಪಸ್ಸಾಗಿದ್ದ ಎಂಬ ಮಾಹಿತಿ ಬಂದಿದೆ. ಸದ್ಯ ಈ ಇಬ್ಬರನ್ನು ಕಾರವಾರದ ಕರೊನಾ ವಾರ್ಡಿಗೆ ರವಾನಿಸಲಾಗಿದೆ.
-ವಿಸ್ಮಯ ನ್ಯೂಸ್, ಹೊನ್ನಾವರ ಮತ್ತು ಭಟ್ಕಳ