ಮಾದನಗೇರಿ ವ್ಯಕ್ತಿಗೆ ಬಂದ ಸೋಂಕಿಗೆ ಸ್ಥಳೀಯ ಹಿನ್ನಲೆ ಇದೆಯೇ?

ಅಂಕೋಲಾ: ದಿನಗಳೆದಂತೆ ಮಹಾಮಾರಿ ಕೊರೊನಾ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಅವಿರತ ಸೇವೆಯಿಂದ ನಿಯಂತ್ರಣದಲ್ಲಿದೆಯಾದರೂ, ಜೂನ್ 29ರಂದು ಒಂದೇ ದಿನಕ್ಕೆ ಹೊಸ 24 ಪ್ರಕರಣಗಳು ದಾಖಲಾಗುವದರೊಂದಿಗೆ 200ರ ಗಡಿದಾಟಿದೆ.
ಗೋಕರ್ಣ-ಮಾದನಗೇರಿ ವ್ಯಕ್ತಿಯಲ್ಲಿಯೂ ಸೋಂಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿಸಿ, ಅಂಕೋಲಾ ಅಗ್ರಗೋಣ-ಶೇಡಿಕಟ್ಟ್ಟೆ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಬಂದಿರಬಹುದೆಂದು ಬಹುತೇಕರು ಮಾತನಾಡಿಕೊಳ್ಳುತ್ತಿದ್ದರು ಆದರೆ ಮಾದನಗೇರಿ ವ್ಯಕ್ತಿ ಎಂದು ಹೇಳಲಾದ ಸೋಂಕಿತನು ಹೊರರಾಜ್ಯದವನಾಗಿದ್ದು, ರಸ್ತೆ ಕಾಮಗಾರಿವಹಿಸುವ ಗುತ್ತಿಗೆ ಕಂಪನಿಯಲ್ಲಿ ಕೆಲಸಕ್ಕಿದ್ದ ಎನ್ನಲಾಗಿದ್ದು ಈತನು ತನ್ನೂರಿನಿಂದ ಕುಮಟಾ ಮಾರ್ಗವಾಗಿ ಬರಬೇಕಾದರೆ ಆತನ ಸೋಂಕು ಪ್ರಕರಣ ತಿಳಿದು ಬಂದಿದೆ ಎನ್ನಲಾಗಿದ್ದು ಆತನು ಈ ಹಿಂದೆ ಮಾದನಗೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರಿಂದ ತಾನು ಮಾದನಗೇರಿಯವನು ಎಂದು ಹೇಳಿಕೊಂಡಿರಬಹುದೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಹಾಗಾಗಿ ಈ ಸೋಂಕಿತನಿಗೂ ಮತ್ತು ಅಂಕೋಲಾದ ಸೋಂಕಿತ ವ್ಯಕ್ತಿಯಿಂದ ಯಾವುದೇ ನಂಟು ಇರಲಿಕ್ಕಿಲ್ಲ ಎನ್ನಲಾಗಿದೆ.

ಆರಂಭದಿಂದ ಇಲ್ಲಿಯವರೆಗೆ ಅಂಕೋಲಾದಿಂದ ಒಟ್ಟೂ 528 ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು ಈಗಾಗಲೇ 462 ವರದಿಗಳು ನೆಗಟಿವ್ ಎಂದು ಬಂದಿದ್ದು, 4 ವರದಿಗಳು ಪಾಸಿಟಿವ್ ಆಗಿವೆ. ಮತ್ತೆ 62 ವರದಿಗಳು ಬರಬೇಕಿದೆ.

ಭಾವಿಕೇರಿ ಮಹಿಳೆ, ಅಗ್ರಗೋಣ-ಶೇಡಿಕಟ್ಟ್ಟೆ ಪುರುಷ ಮತ್ತು ಆತನ ಹೆಂಡತಿ ಹಾಗೂ ಮಗಳು ಸೇರಿ ನಾಲ್ವರಲ್ಲಿ ಪಾಸಿಟಿವ್ ಧೃಡಪಟ್ಟಿತ್ತು. ಭಾವಿಕೇರಿ ಮಹಿಳೆ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಶೇಡಿಕಟ್ಟ್ಟೆ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]
Exit mobile version