Follow Us On

Google News
Uttara Kannada
Trending

ಜಿಲ್ಲೆಯಲ್ಲಿ ಕರೊನಾ ಅಬ್ಬರ: ಇಂದು 40ಕ್ಕೂ ಹೆಚ್ಚು ಕೇಸ್?

ಭಟ್ಕಳದಲ್ಲಿ 21 ಪಾಸಿಟಿವ್ ಸಾಧ್ಯತೆ
ಅಂಕೋಲಾದಲ್ಲಿ 4?
ಹಳಿಯಾಳ, ದಾಂಡೇಲಿ 4?
ಕುಮಟಾ, ಮುಂಡಗೋಡ 3?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕರೊನಾ ಅಬ್ಬರಿಸುತ್ತಿದ್ದು, ಇಂದು ಒಂದೇ ದಿನ 40 ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಭಟ್ಕಳ ತಾಲೂಕಿನಲ್ಲಿ ಅತಿಹೆಚ್ಚು ಅಂದರೆ 21 ಮಂದಿಗೆ ಸೋಂಕು ದೃಢಪಟ್ಟಿರುವ ಸಾಧ್ಯತೆ ಇದ್ದು, ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರಿಗೇ ಸೋಂಕು ತಗುಲಿದೆ. ಅಂಕೋಲಾದಲ್ಲೂ ನಾಲ್ಕು ಪ್ರರಕರ ದಾಖಲಾಗಿದೆ ಎನ್ನಲಾಗಿದೆ. ಅಂಕೋಲಾದಲ್ಲಿ ಸೋಮವಾರ ಕಳುಹಿಸಿದ 15 ಪರೀಕ್ಷಾ ವರದಿ ಸೇರಿ ಇವರೆಗೆ ಒಟ್ಟು 624 ಗಂಟಲು ದ್ರವದ ಮಾದರಿಯನ್ನು ಕಳುಹಿಸಲಾಗಿದೆ. ಇವುಗಳಲ್ಲಿ 550 ಜನರ ವರದಿ ನೆಗೆಟಿವ್ ಬಂದಿದೆ. 74 ಜನರ ಪರೀಕ್ಷಾ ವರದಿ ಇನ್ನೂ ಬರಬೇಕಿದೆ. ಕುಮಟಾ, ಮುಂಡಗೋಡಿನಲ್ಲಿ ತಲಾಾ ಮೂರು ಪ್ರಕರಣ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‌ಲ್ಲಿ ಅಧಿಕೃತ ಮಾಹಿತಿ ಪ್ರಕಟಗೊಳ್ಳಲಿದ್ದು, ನಿಖರವಾದ ಅಂಕಿ-ಸ0ಖ್ಯೆಗಳು ಅಂತಿಮಗೊಳ್ಳಲಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ.

ವಿಸ್ಮಯ ನ್ಯೂಸ್, ಭಟ್ಕಳ-ಅಂಕೋಲಾ-ಕುಮಟಾ

[sliders_pack id=”1487″]

Back to top button
Idagunji Mahaganapati Chandavar Hanuman