ಮಾಹಿತಿ
Trending

ಅಂಕೋಲಾ ಲಾಯನ್ಸ್ ಕರಾವಳಿ ನೂತನ ಪದಾಧಿಕಾರಿಗಳ ಆಯ್ಕೆ

ಅಂಕೋಲಾ: ಅಂಕೋಲಾ ಲಾಯನ್ಸ ಕ್ಲಬ್ ಕರಾವಳಿಯ 2020-21ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಆದಾಯ ಕರ ಇಲಾಖೆಯ ನಿವೃತ್ತ ಅಧಿಕಾರಿ ಶಂಕರ ಹುಲಸ್ವಾರ, ಕಾರ್ಯ ದರ್ಶಿಯಾಗಿ ದಂತ ವೈದ್ಯ ಡಾ.ಕರುಣಾಕರ ಎಂ.ಎನ್., ಖಜಾಂಚಿಯಾಗಿ ಉದ್ಯಮಿ ಓಂಪ್ರಕಾಶ ಪಟೇಲ್, ಉಪಾಧ್ಯಕ್ಷರಾಗಿ ಸ್ವೀಟ್ ಸಾಗರ ಬೇಕರಿ ಮಾಲಕ ರಮೇಶ ಪರಮಾರ ಮತ್ತು ಗಾಂವಕರ ಮೇಮೊರಿಯಲ್ ಫೌಂಡೇಶನ ಅಧ್ಯಕ್ಷ ದೇವಾನಂದ ಬಿ. ಗಾಂವಕರ ಬಾಸಗೋಡ ಅಧಿಕಾರ ವಹಿ ಸಿಕೊಳ್ಳಲಿದ್ದಾರೆ.
ಸದಸ್ಯತ್ವ ಅಭಿಯಾನ ಸಮಿತಿ ಅಧ್ಯಕ್ಷರಾಗಿ ಗಣಪತಿ ನಾಯಕ, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ಕೇಶವಾನಂದ ನಾಯಕ, ಎಲ್.ಸಿ.ಐ.ಎಫ್. ಸಂಯೋಜಕರಾಗಿ ಡಾ. ನರೇಂದ್ರ ನಾಯಕ, ವ್ಯವಹಾರಿಕ ಸಂವಹನ ಅಧಿಕಾರಿಯಾಗಿ ಸಂತೋಷ ಸಾಮಂತ, ಟೇಮರ್ ಆಗಿ ಸದಾನಂದ ಶೆಟ್ಟಿ, ಟೇಲ್ ಟ್ವಿಸ್ಟರಾಗಿ ಚೈನಸಿಂಗ್ ಚೌಹಾಣ ಆಯ್ಕೆಯಾಗಿದ್ದಾರೆ.
ಕ್ಲಬ್‌ನ ಆಡಳಿತಾಧಿಕಾರಿಯಾಗಿ ಮಂಜುನಾಥ ನಾಯಕ, ಗೌರವಾ ಕಾರ್ಯದರ್ಶಿಯಾಗಿ ಕ್ಲಬ್‌ನ ಹಿರಿಯ ಸದಸ್ಯ ಸುಬ್ರಹ್ಮಣ್ಯ ಉಡುಪಿ, ನಿರ್ದೆಶಕರಾಗಿ ಹಿರಿಯ ಸದಸ್ಯರಾದ ಕೃಷ್ಣಾನಂದ ಶೆಟ್ಟಿ, ಎಲ್.ಕೆ. ನಾಯ್ಕ, ಸಂಜಯ ಅರುಂದೇಕರ, ಗಿರಿಧರ ಆಚಾರ್ಯ, ಗಣೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಳೆದ 2 ದಶಕಗಳಿಂದ ಸಾಮಾಜಿಕ ಸೇವೆ ಮತ್ತು ತನ್ನ ವಿಧಾಯಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಅಂಕೋಲಾ ಲಾಯನ್ಸ್ ಕರವಾಳಿಯು ಪ್ರತಿಷ್ಠಿತ ಕ್ಲಬ್‌ಆಗಿದೆ. ಅಧ್ಯಕ್ಷ ಮಹಾಂತೇಶ ರೇವಡಿ ಶೀಘ್ರವೇ ನೂತನ ಪದಾ ಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

Back to top button