
ಕುಮಟಾ: ಕುಮಟಾದ ಪ್ರತಿಷ್ಠಿತ ಹವ್ಯಕ ಸೌಹಾರ್ದ, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹವ್ಯಕ ಸೌಹಾರ್ದ ಸಹಕಾರಿ ನಿಯಮಿತ ಇವರು, ಐದು ಆಶಾ ಕಾರ್ಯಕರ್ತೆಯರಿಗೆ ತಲಾ ಮೂರುಸಾವಿರ ರೂಪಾಯಿಯ ಚೆಕ್ ವಿತರಿಸಿದರು. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ ಸಹಕಾರಿಯ ನೌಕರರಿಗೆ ಕರೊನಾ ವಿಮೆ ಮಾಡಲಾಯಿತು. ಸಹಕಾರಿಯ ಅಧ್ಯಕ್ಷರಾದ ವಿಷ್ಣು ಶಾಸ್ತ್ರಿ, ಆಡಳಿತ ಮಂಡಳಿಯ ನಿರ್ದೇಶಕರು, ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಕುಮಟಾ