Follow Us On

WhatsApp Group
ಮಾಹಿತಿ
Trending

ಎಸ್ ಎಸ್ ಎಲ್ ಸಿ ಪರೀಕ್ಷೆಯ ಮಾರ್ಗ ಮಧ್ಯದಲ್ಲೊಂದು ಅಗ್ನಿಪರೀಕ್ಷೆ

ಚಾಲಕ,‌ನಿರ್ವಾಹಕನ ಸಮಯಪ್ರಜ್ಞೆ
ದೂರವಾಯ್ತು ವಿದ್ಯಾರ್ಥಿಗಳ ಆತಂಕ

ಕುಮಟಾ: ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಿರುವಾಗ ರಸ್ತೆ ಮಧ್ಯೆ ಬೃಹತ್ ಮರವೊಂದು ಬಿದ್ದಿತ್ತು. ಇದನ್ನು ನೋಡಿ ಪರೀಕ್ಷೆ ಬರೆಯೋದು ಹೇಗೆ ಎಂದು ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಕಂಗಾಲಾಗಿದ್ದರು. ಹೌದು, ಮುಂಜಾನೆ ಯಾಣದಿಂದ ಮಿರ್ಜಾನ್ ಸ್ಕೂಲ್ ಗೆ ಮಕ್ಕಳನ್ನು ಸಾಗಿಸಲು ಹೊರಟ ಸಾರಿಗೆ ಬಸ್ಸಿಗೆ ರಸ್ತೆಯಲ್ಲಿ ಅಡ್ಡವಾಗಿ ಬಿದ್ದಿತ್ತು. ಈ ವೇಳೆ ಮರವನ್ನು ಚಾಲಕ ಜಗದೀಶ್ ಪಟಗಾರ ನಿರ್ವಾಹಕ ಭಾಸ್ಕರ್ ಪಟಗಾರ ಅವರ ಸ್ವಯಂ ಪ್ರಯತ್ನದಿಂದ ತೆರವುಗೊಳಿಸಿ, ಯಾವುದೇ ಒಂದು ಸಮಸ್ಯೆಯಿಲ್ಲದೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದರು. ಇವರ ಕೆಲಸ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ..

[sliders_pack id=”1487″]

Back to top button