Uttara Kannada
Trending

ವಿನಾಯಕ ಕಾಮತ್ ಉತ್ತರ ಕನ್ನಡ ಅಸಿಸ್ಟಂಟ್ ಗವರ್ನರಾಗಿ ನೇಮಕ

ಅಂಕೋಲಾ : ಕೊಲ್ಲಾಪುರದ ರೊ.ಸಂಗ್ರಾಮ ಪಾಟೀಲ್‍ರವರು ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ರೊ.ವಿನಾಯಕ ಕಾಮತ್ ಅವರನ್ನು ಉತ್ತರ ಕನ್ನಡ ಅಸಿಸ್ಟಂಟ್ ಗವರ್ನರಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ವಿನಾಯಕ ಕಾಮತ್ ಅವರು ಹೆಸರಾಂತ ಉದ್ದಿಮೆದಾರರಾಗಿದ್ದು, ಅಂಕೋಲಾ ರೂರಲ್ ರೋಟರಿ ಕ್ಲಬ್ ನ ಮೂಲಕ ಹತ್ತಾರು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡವರು. ಕ್ಲಬ್‍ನ ಸದಸ್ಯರಾಗಿ, ಮಾಜಿ ಅಧ್ಯಕ್ಷರಾಗಿ ರೋಟರಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಉತ್ತರ ಕನ್ನಡ ಜಿಲ್ಲೆಯ ಆಯ್ದ ಕ್ಲಬ್ ಗಳಿಗೆ ಇವರು 2020-21ನೇ ಸಾಲಿನಲ್ಲಿ ಅಸಿಸ್ಟಂಟ್ ಗವರ್ನರ್‍ರಾಗಿ ನೇಮಕಗೊಂಡಿದ್ದಾರೆ.
ಅಸಿಸ್ಟಂಟ್ ಗವರ್ನರ್ ಆಗಿ ನೇಮಕವಾಗಿರುವ ವಿನಾಯಕ ಕಾಮತ್ ಇವರ ಧರ್ಮಪತ್ನಿ ಶ್ರೀಮತಿ ಯೋಗಿತಾ ಕಾಮತ್ ಇವರು ಪ್ರಸಕ್ತ ಸಾಲಿನ ಅಂಕೋಲಾ ರೂರಲ್ ರೋಟರಿ ಕ್ಲಬ್‍ನ ಅಧ್ಯಕ್ಷರಾಗಿ ಆಯ್ಕೆ ಯಾಗುವುದರೊಂದಿಗೆ ಅವರ್ಸಾದ ದಂಪತಿಗಳು ರೋಟರಿ ಕುಟುಂಬದಲ್ಲಿಯೂ ಮಹತ್ತರ ಜವಾಬ್ದಾರಿ ಹೊತ್ತಂತಾಗಿದೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button