Uttara Kannada
Trending

ಅಂಕೋಲಾದಲ್ಲಿ ಮತ್ತೆ 6 ಪ್ರಕರಣ ?

ಹಳವಳ್ಳಿ, ಬಡಗೇರಿ, ಹುಲಿದೇವರವಾಡ, ಕೋಟೆವಾಡಗಳಿಗೂ ವಕ್ಕರಿಸಿತೆ? ಸೋಂಕು?
ಭಾನುವಾರ ಲಾಕಡೌನ್ ಅಂಕೋಲಾದಲ್ಲೂ ಜಾರಿ

ಅಂಕೋಲಾ : ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಕೋರೋನಾ ಸೋಂಕಿನ ಕರಿ ನೆರಳು ಅಂಕೋಲಾದಲ್ಲಿಯೂ ಹೆಚ್ಚುತ್ತಿದ್ದು, ಶನಿವಾರ ಮತ್ತೆ 6 ಹೊಸ ಪ್ರಕರಣಗಳು ಧೃಡಗೊಳ್ಳುವ ಸಾಧ್ಯತೆ ಇದೆ.

ಭಾವಿಕೇರಿ ಮಹಿಳೆ ಪ್ರಕರಣ ನಂತರ ಅಗ್ರಗೋಣ-ಶೇಡಿಕಟ್ಟಾ ಸುತ್ತಮುತ್ತಲಿನ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದ್ದ ಸೋಂಕು ಈಗ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ತಾಲೂಕಿನ ಜನತೆಯ ಆತಂಕ ಹೆಚ್ಚುವಂತೆ ಮಾಡಿದೆ.

ಅಗ್ರಗೋಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಪ್ಪತ್ತಾರು ವರ್ಷದ ಪೋಲಿಸ ಪೇದೆಯೋರ್ವನಲ್ಲಿ ಸೋಂಕು ಧೃಡಪಟ್ಟಿದೆ ಎನ್ನುವ ಸುದ್ದಿಯಿಂದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಷ್ಟೇ ಅಲ್ಲದೇ ಜನತೆಯ ನೆಮ್ಮದಿಗೆ ಪೆಟ್ಟು ನೀಡಿತ್ತು. ಈ ಪ್ರಕರಣದ ಹೊರತಾಗಿ ಬಡಗೇರಿಯ ಏಳು ವರ್ಷದ ಬಾಲಕ ಸೇರಿದಂತೆ ಕೋಟೆವಾಡದಲ್ಲಿ 2, ಹುಲಿದೇವರವಾಡಾದಲ್ಲಿ 1 ಮತ್ತು ಹಳವಳ್ಳಿಯಲ್ಲಿ 1 ಹೊಸ ಪ್ರಕರಣ ಸೇರಿ ಒಟ್ಟೂ 6 ಸೋಂಕಿನ ಪ್ರಕರಣಗಳು ಕಂಡು ಬಂದಿವೆ ಎಂದು ಹೇಳಲಾಗಿದ್ದು, ಈ ಕುರಿತುಸಂಜೆಯ ಹೆಲ್ತ್ ಬುಲೆಟಿನ್‌ನಲ್ಲಿ ಧೃಡಗೊಳ್ಳಬೇಕಿದೆ. ಇವರಿಗೆ ಸೋಂಕು ಎಲ್ಲಿಂದ ತಗುಲಿರಬಹುದು ಮತ್ತು ಇವರ ಪ್ರಾಥಮಿಕ ಸಂಪರ್ಕಕ್ಕೆ ಯಾರೆಲ್ಲಾ ಬಂದಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು

ರಾಜ್ಯಾದಾದ್ಯಂತ ನಾಳೆಯಿಂದ ಜಾರಿಗೆ ತರಲು ಉದ್ದೇಶಿಸಲಾಗಿದ್ದ ಭಾನುವಾರದ ಲಾಕಡೌನ್ ಆದೇಶಕ್ಕನ್ನುಗುಣವಾಗಿ ಅಂಕೋಲಾದಲ್ಲಿಯೂ ಭಾನುವಾರದ ಕರ್ಪ್ಯೂ ಜಾರಿಗೊಳಿಸಲಾಗಿದೆ. ಹೋಟೆಲ್ಗಳಲ್ಲಿ ಪಾರ್ಸೆಲ್ ನೀಡಲು ಮತ್ತು ಮೆಡಿಕಲ್ ಶಾಪ್‌ಗಳಿಗೆ ಅನುಮತಿ ನೀಡಲಾಗಿದೆ. ಆರೋಗ್ಯ ಸಂಬAಧಿ ಮತ್ತಿತ್ತರ ತುರ್ತು ಅವಶ್ಯಕತೆ ಇದ್ದರೆ ಮಾತ್ರ ಸಂಚಾರ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Back to top button