ಅಂಕೋಲಾ: ತಾಲೂಕಿನ ಬೇರೆ ಬೇರೆ ಕಡೆ ಕೋಳಿ ಗೂಡಿಗೆ ನುಗ್ಗಿ ಆತಂಕ ಮೂಡಿಸಿದ್ದ ನಾಗರಹಾವುಗಳನ್ನು ಉರಗ ರಕ್ಷಕ ಮಹೇಶ ನಾಯ್ಕ ಅವರ್ಸಾ ಅವರು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ತಾಲೂಕಿನ ಸುಂಕಸಾಳದ ಮನೆಯೊಂದರ ಕೋಳಿ ಗೂಡಿಗೆ ಶನಿವಾರ ರಾತ್ರಿ 6 ಅಡಿ ಉದ್ದದ ಭಾರೀ ಗಾತ್ರದ ನಾಗರಹಾವು ನುಗ್ಗಿದ್ದು ಮನೆಯವರು ಹೆದರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು, ರಾಮನಗುಳಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಮಹೇಶ ನಾಯ್ಕ ಅವರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ಅವರು ಹಾವನ್ನು ಹಿಡಿದು ಸುರಕ್ಷತವಾಗಿ ಅರಣ್ಯ ಪ್ರದೇಶದಲ್ಲಿ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಅದೇ ರೀತಿ ಕೇಣಿ ಹರಿಕಂತ್ರವಾಡಾದ ಪಾಂಡುರಂಗ ಹರಿಕಂತ್ರ ಎನ್ನುವವರ ಮನೆಯ ಕೋಳಿ ಗೂಡಿಗೆ ನಾಗರಹಾವು ನುಗ್ಗಿ 9 ಕೋಳಿಗಳನ್ನು ಸಾಯಿಸಿದ್ದು ಕೋಳಿಗಳ ಅರಚಾಟ ಕೇಳಿ ಬೆಳಿಗ್ಗಿನ ಜಾವ 4 ಗಂಟೆಗೆ ಮನೆಯ ಜನರು ಹೋಗಿ ಗಮನಿಸಿದಾಗ ನಾಗರಹಾವು ಇರುವುದು ಗಮನಕ್ಕೆ ಬಂದಿದೆ, ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ಅವರು ಹಾವನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
9 ನಾಟಿ ಕೋಳಿಗಳನ್ನು ಹಾವು ಸಾಯಿಸಿದ್ದು ಮನೆಯವರಿಗೆ ಸುಮಾರು 8 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.ಕಾಡು ಪ್ರಾಣಿಗಳು,ವಿಷಜಂತುಗಳು ಮತ್ತಿತರ ಕಾರಣಗಳಿಂದ ಬಡವರು ರೈತರು,ನಾನಾ ರೀತಿಯ ನಷ್ಟ ಸಂಕಷ್ಟ ಎದುರಿಸುತ್ತಿದ್ದು ಅಂತಹ ಸಂದರ್ಭಗಳಲ್ಲಿ ಸರ್ಕಾರ ನೊಂದವರ ನೆರವಿಗೆ ಮುಂದಾಗ ಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. ಆಳುವ ಜನಪ್ರತಿನಿಧಿಗಳು ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳು ಇತ್ತೀಚಿಗೆ ಬಬ್ರುವಾಡ ದಲ್ಲಿ ಮಂಗನ ಉಪಟಳದಿಂದ ನೊಂದವರಿಗೂ ಪರಿಹಾರ ನೀಡಬೇಕು ಎನ್ನುವ ಆಗ್ರಹ ಕೇಳಿಬಂದಿದ್ದು ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ ತಮ್ಮ ಇಲಾಖಾ ಕಾರ್ಯ ವ್ಯಾಪ್ತಿಯಲ್ಲಿ ಕೈಲಾದ ನೆರವು ಸಹಾಯ ನೀಡುವ ಭರವಸೆ ನೀಡಿದ್ದಾರೆ.
ಅರಣ್ಯ ಇಲಾಖೆ ಜೊತೆ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವ ಮಹೇಶ್ ನಾಯಕ್ ಅವರ್ಸಾ ಮತ್ತು ಅವರ ತಂಡಕ್ಕೆ ಪೂರಕ ಸಾಧನ ಸಲಕರಣೆಗಳನ್ನು ನೀಡುವುದರ ಜೊತೆ ವಿಶೇಷ ಗೌರವವನ್ನು ನೀಡಬೇಕೆನ್ನುವ ಮಾತು ನಾಗರಿಕ ವಲಯದಿಂದ ಕೇಳಿ ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.