ಹೊನ್ನಾವರದಲ್ಲಿ ಇಂದು ಎಂಟು ಕರೊನಾ ಕೇಸ್ ದೃಢ

ಪಟ್ಟಣ ವ್ಯಾಪ್ತಿಯಲ್ಲೇ ನಾಲ್ಕು ಪಾಸಿಟಿವ್
ಮಂಕಿಯಲ್ಲಿ 3, ಕರ್ಕಿಯ ಓರ್ವನಲ್ಲಿ ಸೋಂಕು

[sliders_pack id=”2570″]

ಹೊನ್ನಾವರ: ತಾಲೂಕಿನಲ್ಲಿ ಕರೊನಾ ಆರ್ಭಟ ನಿಲ್ಲುತ್ತಿಲ್ಲ. ಶನಿವಾರವಾದ ಇಂದು ಎಂಟು ಕರೋನಾ ದೃಢಪಟ್ಟಿದೆ. ಹೊನ್ನಾವರ ಪಟ್ಟಣದಲ್ಲಿ ನಾಲ್ಕು, ಮಂಕಿಯಲ್ಲಿ ಮೂರು ಮತ್ತು ಕರ್ಕಿಯ ಓರ್ವನಲ್ಲಿ ಪಾಸಿಟಿವ್ ಬಂದಿದೆ. ©Copyright reserved by Vismaya tvಹೊನ್ನಾವರ ತಾಲೂಕಿನ ಮಂಕಿಯ ದೊಡ್ಡಗುಂದದ ಒಂದೇ ಕುಟುಂಬದ 30 ವರ್ಷದ ಮಹಿಳೆ ಮತ್ತು 5, 7 ವರ್ಷದ ಇಬ್ಬರು ಗಂಡು ಮಕ್ಕಳಲ್ಲಿ ಕರೋನಾ ಪಾಸಿಟಿವ್ ದೃಢಪಟ್ಟಿದೆ, ಹೊನ್ನಾವರ ಕರ್ಕಿಯ 6 ವರ್ಷದ ಬಾಲಕನಲ್ಲಿಯು ಕರೊನಾ ಕಾಣಿಸಿಕೊಂಡಿದೆ. ಹೊನ್ನಾವರ ಪಟ್ಟಣದ ಬಜಾರ್ ರಸ್ತೆಯ 26 ವರ್ಷದ ಯುವತಿ, ಪ್ರಭಾತ ನಗರ ಗಾಂಧಿನಗರದ 40 ವರ್ಷದ ಪುರುಷ ಮತ್ತು ಕೆಳಗಿನಪಾಳ್ಯದ 26 ವರ್ಷದ ಮಹಿಳೆ ಹಾಗು ಆಕೆಯ 6 ವರ್ಷ ಬಾಲಕಿಗು ಕರೋನಾ ಪಾಸಿಟಿವ್ ದೃಢ ಪಟ್ಟಿದೆ. ಇದೇ ವೇಳೆ ಇಂದು ತಾಲೂಕಾ ಆಸ್ಪತ್ರೆಯಿಂದ 13 ಮಂದಿ ಡಿಸ್ಚಾರ್ಜ್ ಆಗಿದ್ದರೆ, 8 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಒಟ್ಟು 20 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version