Uttara Kannada
Trending

ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಳ್ಳಬೇಟೆಯಲ್ಲಿ ತೊಡಗಿದ್ದ ಆರೋಪಿ ಬಂಧನ

ಜೊಯಿಡಾ: ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವಲಯದಲ್ಲಿ ವನ್ಯ ಪ್ರಾಣಿ ಬೇಟೆ ಮಾಡುತ್ತಿರುವ ಆರೋಪಿಯನ್ನು ಹಿಡಿದು ಪ್ರಕರಣ ದಾಖಲಿಸಲಾಗಿದೆ.©Copyright reserved by Vismaya tv ಅಣಶಿ ವನ್ಯ ಜೀವಿ ವಲಯದ ಸಾವಂತ ಮಾತ್ಕರ್ಣೀ ಶಾಖೆಯ ಬಿಡೋಲಿ ಅರಣ್ಯ ಸರ್ವೆ ನಂಬರ 13 ರಲ್ಲಿ ಅಣಶಿ,ಗುಂದ,ಪಣಸೋಲಿ ವಲಯದ ಅರಣ್ಯ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ರಾತ್ರಿ ಗಸ್ತು ತಿರುಗುತ್ತಿರುವ ವೇಳೆ ಆರೋಪಿತನಾದ ಸಂಜಯ ರಾಮ ಕಣ್ಣೇಕರ ಸಾ/ ಅಂಬೋಳ್ಳಿ 38 ವರ್ಷ ಈತ ಬಂದೂಕು,ಮದ್ದುಗುAಡು ಮತ್ತು ಹೆಡ್ ಲೈಟ್ ಸಮೇತ ಸಿಕ್ಕಿದ್ದು, ಈ ಆರೋಪಿಯ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ ಅಡಿ ದೂರು ದಾಖಲಿಸಿಕೊಳ್ಳಲಾಗಿದ್ದು,ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಇವನ ಜೊತೆ ಇರುವ 2 ಜನ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ತಪ್ಪಿಸಿಕೊಂಡ ಆರೋಪಿಗಳ ಪತ್ತೆಕಾರ್ಯ ನಡೆಯುತ್ತಿದೆ.©Copyright reserved by Vismaya tv
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ನಿರ್ದೇಶಕರಾದ ಮಾರಿಯಾ ಕ್ರೈಸ್ತು ರಾಜಾ,ಅಣಶಿ ಎಸಿಎಪ್ ಶಿವಾನಂದ ತೋಡ್ಕರ,ದಾಂಡೇಲಿ ಎಸಿಎಪ್ ಕೆ.ಎಸ್ ಗೊರವರ ಮುಂದಾಳತ್ವದಲ್ಲಿ ಅಣಶಿ ಆರ್‌ಎಪ್‌ಓ ಮಹಾಂತೇಶ ಪೊಲೀಸ್ ಪಾಟೀಲ,ಪಣಸೋಲಿ ಆರ್‌ಎಪ್‌ಓ ಸಂಗಮೇಶ ಪಾಟೀಲ ಮತ್ತು ಉಪ ಅರಣ್ಯಾಧಿಕಾರಿಗಳಾದ ಜಿ.ಆಯ್ ನಾಯ್ಕ, ಆರ್.ಜಿ.ನಾಯ್ಕ,ಪ್ರಸನ್ನ ಅಮರಾವತಿ,ಶ್ರೀಮಂತ ಕಟ್ಟಿಮನಿ,ಜಗದೀಶ ಮಸಳಿ ವಹಾಗೂ ಅರಣ್ಯ ರಕ್ಷಕರಾದ ಸಂತೋಷ ಮಠಪತಿ,ಪ್ರದಾನಿ ಪಾತ್ರೋಟ,ಸಿದ್ದೇಶ್ವರ,ಬಸಪ್ಪ ತೊಟಕಿ,ಈರಪ್ಪ ಹುರುಳಿ,ಹೊನ್ನಕ್ಕಿ ದೂಳನ್ನವರ,ರಾಜಶೇಕರ,ಮುತ್ತಪ್ಪ ಹುಲಕೋಟಿ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button