ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಗ್ರೀನ್ ರ‍್ಯಾಲಿ: ಹೆಬ್ಬಾರ ಮತ್ತು ರಾಜ್ಯಾಧ್ಯಕ್ಷರಿಂದ ಚಾಲನೆ

ಏಕಕಾಲಕ್ಕೆ 14 ಮಂಡಲಗಳಲ್ಲಿ 1700ಕ್ಕೂ ಹೆಚ್ಚು ಸಸಿ ನೆಟ್ಟ ಮೋರ್ಚಾ ಸದಸ್ಯರು
ವಿಶ್ವ ಪರಿಸರ ಸಂರಕ್ಷಣಾ ದಿನದಂದು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ

[sliders_pack id=”1487″]

ಅಂಕೋಲಾ: ಜುಲೈ 28ರ ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಉತ್ತರಕನ್ನಡ ಜಿಲ್ಲಾ ಬಿಜೆಪಿ
ಯುವ ಮೋರ್ಚಾ ವತಿಯಿಂದ ‘ಗ್ರೀನ್ ರ‍್ಯಾಲಿ’ ಎನ್ನುವ ವಿಶೇಷ ಕಾರ್ಯಕ್ರಮವನ್ನು, ಮಂಗಳವಾರ ಜಿಲ್ಲೆಯ ಎಲ್ಲಾ 14 ಮಂಡಲಗಳಲ್ಲಿ ಏಕ ಕಾಲಕ್ಕೆ ನಡೆಸಲಾಯಿತು. ಈ ವೇಳೆ ಒಟ್ಟಾರೆಯಾಗಿ 1700ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಪ್ಲಾಸ್ಟಿಕ್ ಮುಕ್ತ ಸಮಾಜದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.©Copyright reserved by Vismaya tv
ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಯಲ್ಲಾಪುರದಲ್ಲಿ ಚಾಲನೆ : ಯಲ್ಲಾಪುರದ ಎ.ಪಿ.ಎಮ್.ಸಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಸಸಿಗಳನ್ನು ನೆಟ್ಟು, ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ಜಿ. ನಾಯ್ಕ ಸಸಿ ವಿತರಿಸುವ ಮೂಲಕ ಅಂಕೋಲಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಬಿ ನಾರ್ವೆಕರ ಪ್ರಮುಖರಾದ ನಿಲೇಶ ನಾಯ್ಕ ಮತ್ತು ಯುವ ಮೋರ್ಚಾದ ಸದಸ್ಯರು ಪಾಲ್ಗೊಂಡಿದ್ದರು.

ಜಿಲ್ಲೆಯ ಇತರೆ ಮಂಡಲಗಳಲ್ಲಿಯೂ ಏಕಕಾಲಕ್ಕೆ ಚಾಲನೆ : ಹಳಿಯಾಳದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ಇತರೆ ಮಂಡಳಗಳಲ್ಲಿ ಆಯಾ ಭಾಗದ ಯುವ ಮೋರ್ಚಾ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪ್ರತಿ ಮಂಡಳದಿAದ ಸರಿ ಸುಮಾರು 100ರಿಂದ 150 ಸಸಿಗಳನ್ನು ಬೆಳಗಿನ 9.30ರಿಂದ 11ಗಂಟೆಯ ಅವಧಿಯಲ್ಲಿ ನೆಟ್ಟು ಪರಿಸರ ಸಂರಕ್ಷಣೆಯ ಜಾಗೃತಿ ಸಂದೇಶ ರವಾನಿಸಿದರು. ಶಾಸಕಿ ರೂಪಾಲಿ ನಾಯ್ಕ, ಶಾಸಕರಾದ ಸುನೀಲ ನಾಯ್ಕ, ದಿನಕರ ಶೆಟ್ಟಿ ರಾಜ್ಯಾಧ್ಯಕ್ಷರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿದ್ದರಿಂದ ತಮ್ಮ ತಮ್ಮ ವಿಧಾನ ಸಭಾ ಕ್ಷೇತ್ರಗಳ ಯುವ ಮೋರ್ಚಾ ಸದಸ್ಯರಿಗೆ ಶುಭಾಷಯ ಸಲ್ಲಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version