ಕರೊನಾ ಗೆದ್ದು ಬಂದ ಗ್ರಾ.ಪಂ. ಪಿ.ಡಿ.ಓ
ಅಂಕೋಲಾದಲ್ಲಿ ಹೂಮಳೆಯ ಸ್ವಾಗತ
‘ಸೇವೆಗೆ ಸಿದ್ಧ, ಕಾಲಕ್ಕೆ ಬದ್ಧ’
ಅಂಕೋಲಾ: ಪಿ.ಡಿ.ಓ ತನ್ನ ಕರ್ತವ್ಯಕ್ಕೆ ಹಾಜರಾಗಲು ಬಂದಾಗ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ ಸಾವಂತ ಮತ್ತು ಗ್ರಾ.ಪಂ. ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಹೂಮಳೆಗರೆದು ಆತ್ಮೀಯವಾಗಿ ಸ್ವಾಗತಿಸಿದ ದೃಶ್ಯ ಸೋಮವಾರ ಹಾರವಾಡ ಗ್ರಾಮಪಂಚಾಯತದಲ್ಲಿ ಕಂಡು ಬಂತು.
ತಾಲೂಕಿನಲ್ಲಿ ಕಾಣಿಸಿಕೊಂಡಿದ್ದ ಕರೊನಾ ಸೋಂಕು, ಹಾರವಾಡ ಗ್ರಾಮದ ಕೆಲವರಲ್ಲಿಯೂ ಕಾಣಿಸಿಕೊಂಡಿದ್ದಲ್ಲದೇ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಗೌಡರಲ್ಲಿಯೂ ಜುಲೈ 19ರಂದು ಪಾಸಿಟಿವ್ ಲಕ್ಷಣ ದೃಢಪಟ್ಟು, ಗ್ರಾ.ಪಂ. ಅನ್ನು ಸೀಲ್‍ಡೌನ್ ಮಾಡಲಾಗಿತ್ತು. ಪಿ.ಡಿ.ಓ ಸೋಂಕಿನಿಂದ ಮುಕ್ತರಾಗಿ ಮತ್ತೇ ತಮ್ಮ ಕರ್ತವ್ಯಕ್ಕೆ ಹಾಜರಾಗಲು ಬಂದ ವೇಳೆ ಗ್ರಾ.ಪಂ. ಹೊರ ಆವರಣದಲ್ಲಿ, ಹೂಮಳೆಗರೆದು ಚಪ್ಪಾಳೆ ತಟ್ಟಿ ಸ್ವಾಗತಿಸಲಾಯಿತು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ ಸಾವಂತ ಹೂಗುಚ್ಛ ನೀಡಿ ಸ್ವಾಗತಿಸಿ ತಾಲೂಕಿನ ಎಲ್ಲಾ ಕರೊನಾ ವಾರಿಯರ್ಸ್‍ಗಳ ಸೇವೆಯನ್ನು ಶ್ಲಾಘೀಸಿದರು.
ಗ್ರಾ.ಪಂ. ಪ್ರವೇಶದ್ವಾರದ ಮೇಲ್ಗಡೆ ‘ಸೇವೆಗೆ ಸಿದ್ಧ: ಕಾಲಕ್ಕೆ ಬದ್ಧ’ ಎಂಬ ಗೋಡೆ ಬರಹ ಪ್ರಸ್ತುತ ಸನ್ನಿವೇಶಕ್ಕೆ ಸರಿ ಹೊಂದುವಂತಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.