ಭಾರೀ ಮಳೆ ಹಿನ್ನಲೆ
ಕತಗಾಲ್ ಸಮೀಪ ರಸ್ತೆಯಲ್ಲಿ ನಿಂತ ನೀರು
ಕುಮಟಾ: ಜಿಲ್ಲೆಯಲ್ಲಿ ನಿಂತರವಾಗಿ ಸುರಿತ್ತಿರುವ ಮಳೆ ಬಾರಿ ಅನಾಹುತಕ್ಕೆ ಎಡೆಮಾಡಿಕೊಡುತ್ತಿದ್ದು, ಜನಜೀವನ ಅಸ್ಥವ್ಯಸ್ಥಗೊಂಡಿದೆ. ಒಂದೆರಡು ದಿನಗಳಕಾಲ ಸ್ವಲ್ಪ ಬಿಡುವು ನೀಡಿದ್ದ ಆಶ್ಲೇಷ ಮಳೆಯು ತನ್ನ ರುದ್ರ ನರ್ತನವನ್ನು ಮತ್ತೆ ಶುರುಮಾಡಿದೆ. ಕುಮಟಾ ತಾಲೂಕಾ ವ್ಯಾಪ್ತಿಯ ನದಿ ತೀರದ ಪ್ರದೇಶಗಳಾದ ಮಿರ್ಜಾನ್, ಕೋಡ್ಕಣಿ, ಐಗಳಕುರ್ವೇ, ಹೆಗಡೆ, ದಿವಗಿ, ತಂಡ್ರಕುಳಿ, ಉಪ್ಪಿನ ಪಟ್ಟಣ ಮುಂತಾದ ಭಾಗಗಳು ನೀರಿನಿಂದ ಆವೃತ್ತಿಗೊಂಡು ಇಲ್ಲಿನ ನಿವಾಸಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಕುಮಟಾದಿಂದ ಶಿರಸಿ ಮಾರ್ಗ ಸ್ಥಗಿತಗೊಂಡಿದೆ. ಕುಮಟಾದಿಂದ ಶಿರಸಿಗೆ ತೆರಳುವ ಕತಗಾಲ್ ಸಮೀಪದ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರ ಸ್ಥಗಿತ ಗೊಂಡಿದೆ. ಅಲ್ಲದೆ, ಕತಗಾಲ್ ಸಮೀಪದ ಉಪ್ಪಿನಪಟ್ಟಣ ಸೇತುವೆ ಮೇಲೆ ನೀರು ನಿಂತಿದೆ.
ಇದೇ ವೇಳೆ ಉಪ್ಪಿನಪಟ್ಟಣದ ಬಂಡವಾಳ ಸಮೀಪ ಭಾರೀ ಮಳೆಯಿಂದಾಗಿ ಗುಡ್ಡು ಕುಸಿದಿದೆ.
ಕರಾವಳಿ ಭಾಗಕ್ಕೆ ಮಳೆಯ ಕಾಟ ಸದ್ಯಕ್ಕೆ ಬಿಡುವ ಲಕ್ಷಣ ಕಂಡುಬರುತ್ತಿಲ್ಲವಾಗಿದ್ದು, ಇನ್ನು 2 ದಿನಗಳ ಕಾಲ ಜಿಲ್ಲೆಯಲ್ಲಿ ಬಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮತ್ತೆ ಎಚ್ಚರಿಕೆ ನೀಡಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.