ಹೊನ್ನಾವರ: ಶರಾವತಿ ನದಿಯ ಎಡ ಮತ್ತು ಬಲ ದಂಡೆಯ ನಿವಾಸಿಗಳಲ್ಲಿ ವಾಸಿಸುವ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದ್ದು, ಜಲಾಶಯದಿಂದ ಮೊದಲ ಮುನ್ನೆಚ್ಚರಿಕೆಯ ಪತ್ರ ರವಾನೆಯಾಗಿದೆ. ಹೊನ್ನಾವರ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಶಿವಮೊಗ್ಗ ಜಿಲ್ಲೆಯಲ್ಲಿ ಬಾರಿ ಪ್ರಮಾಣದ ಮಳೆಯಾಗುತ್ತಿದೆ. ಹೌದು, ಲಿಂಗನಮಕ್ಕಿ ಜಲಾಶಯದಿಂದ ಮದಲ ಮುನ್ನೆಚ್ಚರಿಕೆಯ ಸೂಚನೆ ಬಿಡುಗಡೆಯಾಗಿದ್ದು, ಜಲಾಶಯ ತುಂಬಲು ಇನ್ನು 18 ಅಡಿ ಮತ್ರ ಬಾಕಿ ಇದೆ. ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟಲ್ಲಿ ಗೇರುಸೋಪ್ಪಾ ಜಲಾಶಯದಿಂದ ನೀರು ಬಿಡುವುದು ಅನಿವಾರ್ಯ ಎಂದು ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗ ಜಿಲ್ಲೆ ಹಾಗೂ ಲಿಂಗನಮಕ್ಕಿ ಜಲಾಶಯದ ಪ್ರದೇಶದಲ್ಲಿ ಬಾರಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರು ಹೇರಳವಾಗಿ ಹರಿದು ಬರುವುದರಿಂದ ನೀರಿನ ಮಟ್ಟದಲ್ಲಿ ಒಂದೇ ಸಮನೆ ಏರಿಕೆಕಾಣುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿಯಾಗಿದ್ದು, ಈಗಾಗಲೇ 1801 ತಲುಪಿದೆ. 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದೆ ರೀತಿಯಲ್ಲಿ ನೀರು ಏರಿಕೆಯಾದಲ್ಲಿ ನಿರು ಬಿಡುವುದು ಅನಿವಾರ್ಯ ಎನ್ನಲಾಗಿದೆ.
ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟ ನೀರು ಗೇರುಸೋಪ್ಪಾ ಜಲಾಶಯಕ್ಕೆ ಹರಿದು ಬರುತ್ತದೆ. ಜಲಾಶಯದ ಹಿತದೃಷ್ಟಿಯಿಂದ ನಾವು ಲಿಂಗನಮಕ್ಕಿ ಜಲಾಶಯದಿಂದ ಹರಿದುಬಂದ ನೀರನ್ನು ಹರಿ ಬಿಡಲಾಗುತ್ತದೆ ಶರಾವತಿ ನದಿಯ ಎಡ-ಬಲದಂಡೆಯ ಸಾರ್ವಜನಿಕರು ತಮ್ಮ ಜನ ಜಾನುವಾರು ಜೊತೆಗೆ ಸುರಕ್ಷಿತ ಸ್ಥಳಕ್ಕೆ ತೆರಳಿ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಕುರಿತ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಗೇರುಸೋಪ್ಪಾ ಜಲಾಶಯದ ಗರಿಷ್ಠ ಮಟ್ಟ 55 ಮೀಟರ್ ಆಗಿದ್ದು, ಇಂದಿನ ನೀರಿನ ಮಟ್ಟ 55.56 ಕ್ಕೆ ತಲುಪಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568