ಮಾಹಿತಿ
Trending

ಕೆ.ಎಲ್. ನಾಯ್ಕ ಸರ್ ವಿಧಿವಶ

[sliders_pack id=”3491″]

ಅಂಕೋಲಾ : ತಾಲೂಕಾ ನಾಮಧಾರಿ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷರು, ನಿವೃತ್ತ ಪ್ರೌಢಶಾಲಾ ಶಿಕ್ಷಕರು ಆಗಿದ್ದ ಕೆ.ಎಲ್.ನಾಯ್ಕ (78) ಮಂಗಳವಾರ ರಾತ್ರಿ ಅಂಬಾರಕೊಡ್ಲದ ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಸದಾ ಚುರುಕಿನ ವ್ಯಕ್ತಿತ್ವದವರಾಗಿದ್ದ ಕೆ.ಎಲ್.ನಾಯ್ಕ ಕೆನರಾ ವೆಲ್‍ಫೇರ ಟ್ರಸ್ಟಿನ ಪಿ.ಎಂ. ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಧೀರ್ಘಾವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಭೌತಶಾಸ್ತ್ರ ಮತ್ತಿತರ ಕಠಿಣ ವಿಷಯಗಳನ್ನೂ, ಹಲವು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಭೋಧಿಸುತ್ತಿದ್ದ ಇವರು, ತಮ್ಮ ಹಾಸ್ಯ ಚಟಾಕಿಗಳ ಮೂಲಕವೂ ಗಮನ ಸೆಳೆಯುತ್ತಿದ್ದರು.

ಕಳೆದ ಕೆಲ ವರ್ಷಗಳಿಂದ ನಾಮಧಾರಿ ಸಮಾಜದ ಒಗ್ಗಟ್ಟು ಮತ್ತು ಬಲವರ್ಧನೆಗೆ ಒತ್ತು ನೀಡಿದ್ದ ಇವರು ಸಮಾಜದ ಇತರರ ಸಹಕಾರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ, ಗಣೇಶೋತ್ಸವ, ನಾಮಧಾರಿ ದಹಿಂಕಾಲ ಆಚರಣೆ, ವೆಂಕಟ್ರಮಣ ದೇವರ ರಥೋತ್ಸವ, ಹರಕೆ ಯಕ್ಷಗಾನ ಮತ್ತಿತರ ಹತ್ತಾರು ಧಾರ್ಮಿಕ ಸಾಂಸ್ಕøತಿಕ-ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇತರರಿಗೂ ಮಾದರಿಯಾಗಿದ್ದರು.

ಕೇವಲ ನಾಮಧಾರಿ ಸಮಾಜಕ್ಕಷ್ಟೇ ಗಣ್ಯ ಮತ್ತು ಮಾರ್ಗದರ್ಶಕರಾಗಿರದೇ, ಇತರೇ ಹಲವಾರು ಸಮಾಜದವರಿಗೆ, ಸಾವಿರಾರು ವಿದ್ಯಾರ್ಥಿಗಳಿಗೆ ಗುರುವೇ ಆಗಿ ಎಲ್ಲರ ಪ್ರೀತಿ-ಗೌರವ ಸಂಪಾದಿಸಿದ್ದರು.
ಮೃತರು, ಪತ್ನಿ, ಇಬ್ಬರು ಹೆಣ್ಣುಮಕ್ಕಳು, ಅಳಿಯಂ,ದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗ, ಸಮಾಜ ಬಾಂಧವರು ಹಾಗೂ ಅಸಂಖ್ಯಾ ವಿದ್ಯಾರ್ಥಿ ಬಳಗ ತೊರೆದಿದ್ದಾರೆ.

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ
ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button