Hi Tech Lifeline Hospital Kumta: ಕುಮಟಾ ಹೈಟೆಕ್ ಹಾಸ್ಪಿಟಲ್‌ನಲ್ಲಿ ಆರ್ಥೋಪೆಡಿಕ್ ಓ.ಪಿ.ಡಿ ಶುಭಾರಂಭ

ಕುಮಟಾ: ಪಟ್ಟಣದ ಹೈಟೆಕ್ ಹಾಸ್ಪಿಟಲ್‌ನಲ್ಲಿ Hi Tech Hospital ಇದೀಗ ಆರ್ಥೋಪೆಡಿಕ್ ಸರ್ಜನ್ ಡಾ. ಡಿ.ಎಮ್ ನಾಯ್ಕ ಅವರು ಸಾರ್ವಜನಿಕರ ಸೇವೆಗೆ ಲಭ್ಯವಿರಲಿದ್ದು, ಈ ನಿಟ್ಟಿನಲ್ಲಿ ಇಂದು ಹೈಟೆಕ್ ಹಾಸ್ಪಿಟಲ್‌ನಲ್ಲಿ ಒರ್ಥೋಪೆಡಿಕ್ ಒ.ಪಿ.ಡಿ ಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒ.ಪಿ.ಡಿ ಯ ಉದ್ಘಾಟನೆಯನ್ನು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಕುಮಟಾ ತಾಲೂಕಿನ ಮೂಳೆ ತಜ್ಞರ ಅವಶ್ಯಕತೆ ಬಹಳ ಇದ್ದು, ಈ ನಿಟ್ಟಿನಲ್ಲಿ ಡಾ. ನಿತೀಶ ಶಾನಭಾಗ ಅವರ ಮಾಲೀಕತ್ವದ ಹೈಟೆಕ್ ಹಾಸ್ಪಿಟಲ್‌ನಲ್ಲಿ ಇದೀಗ ಮೂಳೆ ತಜ್ಞರಾದ ಡಾ. ಡಿ.ಎಮ್ ನಾಯ್ಕ ಲಭ್ಯರಿದ್ದಾರೆ. ರಾಷ್ಟಿçÃಯ ಹೆದ್ದಾರಿ ನಮ್ಮಲ್ಲಿ ಹಾದುಹೊಗಿರುವ ಕಾರಣ ದಿನ ನಿತ್ಯ ಸಾಕಷ್ಟು ಅಪಘಾತಗಳು ಸಂಭವಿಸುತ್ತದೆ. ಅಪಘಾತದ ಸಂದರ್ಬದಲ್ಲಿ ಮುಖ್ಯವಾಗಿ ಮೂಳೆ ತಜ್ಞರ ಅವಶ್ಯಕತೆ ಇರುತ್ತದೆ. ಇದೀಗ ಹೈಟೆಕ್ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಸಾರ್ವಜನಿಕರು ಪಡೆದುಕೊಳ್ಳುವಂತಾಗಿದೆ ಎಂದರು.

ಈ ವೇಳೆ ಮೂಳೆ ತಜ್ಞರಾದ ಡಾ. ಡಿ.ಎಮ್ ನಾಯ್ಕ ( Dr. D.M Nayak) ಅವರು ಮಾತನಾಡಿ, ತಮ್ಮ ಈ ಹಿಂದಿನ ಸೇವಾ ಅನುಭವವನ್ನು ಹಂಚಿಕೊಳ್ಳುತ್ತಾ ಲಭ್ಯತೆಯ ಅವಧಿ ಮುಂತಾದವುಗಳ ಕುರಿತು ಸಂಕ್ಷಿಪ್ತ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಹೈಟೆಕ್ ಹಾಸ್ಪಿಟಲ್‌ನ ಮಾಲೀಕರಾದ ಡಾ. ನಿತೀಶ ಶಾನಭಾಗ ಅವರು ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಬಹಳಷ್ಟು ಬಡ ರೋಗಿಗಳಿಗೆ ಈಗಾಗಲೇ ಮಂಗಳೂರಿನ ವೆನ್ ಲಾಕ್, ಎಜೆ ಮುಂತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವ ಡಾ. ಡಿ.ಎಮ್ ನಾಯ್ಕ ಅವರು ಇದೀಗ ನಮ್ಮ ಹೈಟೆಕ್ ಆಸ್ಪತ್ರೆಯಲ್ಲಿಯೇ ಲಭ್ಯವಿರುತ್ತಾರೆ ಎಂದು ತಿಳಿಸಿದರು. ಈ ವೇಳೆ ಹಿರಿಯ ವೈದ್ಯರಾದ ಡಾ. ಅಶೋಕ ಭಟ್ ಹಳಕಾರ, ಡಾ. ವಾಗೀಶ ಭಟ್, ಡಾ. ಪಲ್ಲವಿ ಪ್ರಭು, ಡಾ. ರವಿಕಲಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Exit mobile version