ಮನೆಗೆ ಬೆಂಕಿ: ಬಂಗಾರ, ಹಣ ಸೇರಿ ಹಲವು ವಸ್ತುಗಳು ಬೆಂಕಿಗೆ ಆಹುತಿ

ಶಿರಸಿ: ಮನೆಗೆ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ಹಾನಿಯಾದಾಗ ಘಟನೆ ಶಿರಸಿ ನಗರದ ಕಸ್ತೂರ್ಬಾ ನಗರದಲ್ಲಿ ರಾತ್ರಿ ನಡೆದಿದೆ ಕಸ್ತೂರಬಾ ನಗರದ ಶಾಲಾ ಖಾನ್ ಎಂಬುವರ ಮನೆಗೆ ಸೋಮವಾರ ರಾತ್ರಿ ಬೆಂಕಿ ತಗುಲಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.

ದುರ್ಘಟನೆಯಲ್ಲಿ ಮನೆ ಉರಿದು ಮನೆಯೊಳಗಿದ್ದ ಬಂಗಾರ, ಹಣ,ಬಟ್ಟೆ, ದಿನಸಿ ವಸ್ತುಗಳು, ಪಾತ್ರೆ ಪಗಡೆ ಸೇರಿದಂತೆ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ, ಮನೆಯವರು ದಾಖಲೆ ಪತ್ರಗಳನ್ನು ಕಳೆದುಕೊಂಡು ಕಣ್ಣಿರು ಹಾಕುತ್ತಿದ್ದಾರೆ. ಸ್ಥಳಕ್ಕೆ ಮಾರುಕಟ್ಟೆ ಠಾಣೆ ಪಿಎಸ್‌ಐ ರತ್ನ ಕುರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕಾರಣವೇನೆಂದು ತಿಳಿದು ಬಂದಿಲ್ಲ.

ವಿಸ್ಮಯ ನ್ಯೂಸ್, ಶಿರಸಿ

Exit mobile version